ಗೆಳತಿ:ನೀ ನನ್ನ ಗೆಳತಿ
ಈ ಮನದ ಒಡತಿ,
ಹುಚ್ಚು ಕನಸುಗಳಿಗೆ
ನೀ ಬೇಲಿ ಹಾಕುತಿ.

ದೂರವಿದ್ದರೂ ಸದಾ
ನನ್ನೇಳಿಗೆಯ ಬಯಸುತಿ,
ನನ್ನ ಗೆಲುವ ನಗುವಿಗೆ
ಸದಾ ನೀ ಹರಸುತಿ.

ಸ್ನೇಹದ ಒಲುಮೆಯ
ಕಾಡಿ ನೀ ಬೇಡುತಿ,
ಕಾಣದ ಪ್ರೀತಿಯ
ಸದಾ ನೀ ನೀಡುತಿ.

ಜೀವನದ ಪಾಠವ
ಮರೆಯದೆ ನೀ ತಿಳಿಸುತಿ,
ಒಲುಮೆ ಸಂಧ್ಯಾರಾಗವ
ದಿನವೂ ನೀ ಹಾಡುತಿ.

ಹೃದಯದ ಬೇಗೆಯ
ಕಡಿಮೆ ನೀ ಮಾಡುತಿ,
ಮನದ ನೋವಿಗೆ
ನೀ ಔಷಧವ ನೀಡುತಿ

ಏನೆಂದು ಹೊಗಳಲಿ
ನಾ ನಿನ್ನ ಓ ಗೆಳತಿ,
ಆಗಿರುವೆ ನನ್ನೆಲ್ಲ ಸಾಧನೆಗೆ
ನೀ ಕರುಣಾ ಮೂರುತಿ....No comments:

Post a Comment