ಯುಗಾದಿ:

ಬಂದಿದೆ ಮತ್ತೊಂದು ಹೊಸ ವರುಷ
ಈ ಸಂವತ್ಸರದಲ್ಲಾದರೂ,
ಸಿಗಬಹುದೇ ಹೊಸ ಹರುಷ?

ಪ್ರತಿ ವರುಷದಲ್ಲಿಯೂ ಇದೇ ಆಶಯ
ದೊರಕಲಿ ಎಲ್ಲರಿಗೂ,
ಸುಖ ಶಾಂತಿಯ ಶುಭಾಶಯ.

ನವ ವರ್ಷಕ್ಕೆ ಮತ್ತೆ ಹೊಸ ಸಂಕಲ್ಪ
ಎರಡೇ ದಿನಕ್ಕೆ,
ಮುಗಿಯುವುದಿರಲಿ ಕಾರ್ಯಕಲ್ಪ.

ಪಾಪಿ ಜಗದಲಿ ನಾವು
ಆದರೂ ಬಾಳುತ್ತಿದೇವೆ,
ನಿರೀಕ್ಷೆಯ ಭ್ರಮೆಯಲಿ.

ಅನೀತಿ ಅಕ್ರಮಗಳ
ಸಂಕ್ರಮಣ ಕಾಲವಿದು,
ಕಾದಿದ್ದೇವೆ ಸುಧಾರಿಸುವ ಆಶಯಹೊತ್ತು.

ವರುಷವೆಲ್ಲ ಹರಿಯುತ್ತಿರಲಿ ಹರುಷ
ಪ್ರತಿಯೊಬ್ಬರಿಗೂ ಸಿಗಲೆಂಬ ಪ್ರಾರ್ಥನೆ,
ಸ್ವಾರ್ಥಕ್ಕೆ ನಾವು ಆಗದಿರಲಿ ಉದಾಹರಣೆ.

ಬೇವು-ಬೆಲ್ಲದ ಹಬ್ಬದಲಿ
ಕಹಿಪಾಲು ಗೌಣವಾಗಿ,
ಸಿಹಿಪಾಲು ಸಮೃದ್ಧವಾಗಿ ಪಸರಿಸಲಿ ಎಲ್ಲರಲು.

2 comments:

 1. ಯುಗಾದಿಗೆ ಒಂದು ಚಂದದ ಕವನ..
  ತಮಗೆ ಹಾಗೂ ತಮ್ಮ ಮನೆಯವರೆಲ್ಲರಿಗೂ ಯುಗಾದಿಯ ಶುಭಾಶಯಗಳು..

  ReplyDelete
  Replies
  1. ಧನ್ಯವಾದಗಳು. ಹೊಸ ವರ್ಷ ಎಲ್ಲರಿಗೂ ಶುಭವನ್ನುಂಟುಮಾಡಲಿ.

   Delete