ಕಳೆದು ಹೋದ ಪ್ರೀತಿಯ ಹುಡುಕಾಟದಲ್ಲಿ.
ನವೀನ ಮತ್ತು ಮೇಘನ ಒಳ್ಳೇ ಸ್ನೇಹಿತರು.. ಸುಮಾರು ಎರಡು ವರ್ಷದಿಂದ ಒಂದೇ ಕಾಲೇಜ್ ನಲ್ಲಿ ಓದ್ತಾ ಇದ್ದರು.
ಮಧ್ಯ ವರ್ಗದ ಮನೆಯವನಾದ ನವೀನ ಹುಟ್ಟು ಹುಷಾರು ಅಲ್ಲದಿದ್ದರೂ ಕಷ್ಟ ಪಟ್ಟು ಓದಿ ಒಳ್ಳೇ ಮಾರ್ಕ್ ತಗೊಂಡು
ಈಗ ಎಂಜಿನಿಯರಿಗ್ ಮಾಡ್ತಾ ಇದ್ದ.10ನೇ ವಯಸ್ಸಿನಲ್ಲೇ ಅಪ್ಪ ಅಮ್ಮನನ್ನ ಕಳೆದುಕೊಂಡಿದ್ದ ಮೇಘನ ಈಗ
ಹಾಸ್ಟೆಲ್ ನಲ್ಲಿ ಉಳಿದು ತನ್ನ ಶಿಕ್ಷಣವನ್ನ ಮುಂದುವರೆಸಿದ್ದಳು.ಇವರಿಬ್ಬರ ಪರಿಚಯವಾದದ್ದು ಈಗ ಸುಮಾರು ಎರಡು
ವರ್ಷದ ಮೊದಲೇ ಕಾಲೇಜ್ ನ ಮೊದಲನೇ ದಿನ.ಅಂದಿನಿಂದ ಇಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು
ತಮ್ಮ ಶೈಕ್ಷಣಿಕ ದಿವಸವನ್ನ ಮುಂದೂಡುತ್ತಿದ್ದರು.ಇವರಿಬ್ಬರ ಸ್ನೇಹಕ್ಕೆ ಅಸೂಯೆ ಪಡದವರಿಲ್ಲ.ಕಾಲೇಜ್ ಮನೆಯಿಂದ
ಬರೀ 1ಕಿ.ಮೀ.ದೂರದಲ್ಲಿದ್ದರಿಂದ ನವೀನ ಯಾವಾಗಲೂ ನಡಿಗೆಯಲ್ಲೇ ಹೋಗುತ್ತಿದ್ದ.ದಾರಿಯಲ್ಲೇ ಮೇಘನಾಳ
ಹಾಸ್ಟೆಲ್ ಇದ್ದರಿಂದ ಅಲ್ಲಿಂದ ಇಬ್ಬರೂ ಒಟ್ಟಿಗೆ ಕಾಲೇಜ್ ಗೆ ಹೋಗುತ್ತಿದ್ದರು.ಆಗಾಗ ಮನೆಗೆ ಬರುತ್ತಿದ್ದ ಮೇಘನ
ನವೀನನ ಮನೆಯಲ್ಲಿ ತುಂಬಾ ಸಲಿಗೆಯಿಂದ ಇದ್ದಳು.ಅದರಲ್ಲೂ ಅವಳಿಗೆ ಯಾರೂ ಇಲ್ಲದಿರೋ ಕನಿಕರದಿಂದ
ನವೀನನ ತಾಯಿ ಅವಳನ್ನ ತನ್ನ ಮಗಳಂತೆ ನೋಡುತ್ತಿದ್ದರು.ತಮ್ಮ ಜೀವನ ಪ್ರತಿಯೊಂದೂ ವಿಷಯವನ್ನ
ತಮ್ಮಿಬ್ಬರಲ್ಲಿ ಹೇಳಿಕೊಳ್ಳುವಷ್ಟು ಹತ್ತಿರದ ಸ್ನೇಹ ಇವರದಾಗಿತ್ತು.
ಇದೆ ರೀತಿ ಕಾಲೇಜ್ ನ ಮುಂದಿನ ಎರಡು ವರ್ಷಗಳು ಕಳೆದಿದ್ದವು.ಆಗ ಕಾಲೇಜ್ ನ ಕೊನೆಯ ವರ್ಷ.
ವಯಸ್ಸಿನ ದೋಷದಂತೆ ಎಲ್ಲರ ತರ ನವೀನ ಕೂಡ ಪ್ರೀತಿಯ ಆಕರ್ಷಣೆಗೆ ಒಳಗಾಗಿದ್ದ.ಈ ವಿಷಯವನ್ನು ಕೇಳಿದ್ದ ಮೇಘನ
ನಕ್ಕು ಸುಮ್ಮನಾಗಿದ್ದಳು.ನಿನಗೆ ಬೇಕಾದ ಸಹಾಯವನ್ನು ಮಾಡುವುದಾಗಿಯೂ ಹೇಳಿದ್ದಳು.ಕಾಲೇಜ್ ನಲ್ಲಿದ್ದ ಕಾಜು ಕಣ್ಣಿನ
ಸುಮಾಳ ಮೇಲೆ ನವೀನ ಕಣ್ಣಿತ್ತು.ಹೇಗೋ ಕಷ್ಟ ಪಟ್ಟು ಅವಳನ್ನ ಸಿಕ್ಕು ಮಾತನಾಡಿ ಅವಳ ಜೊತೆ ಹತ್ತಿರವಾಗಿದ್ದ ನವೀನ.
ಈ ವಿಷಯದಲ್ಲಿ ಹೆಚ್ಚಿಗೆ ಮಾತನಾಡದೆ ಮೇಘನ ಇವನ ಪ್ರೀತಿ ಪ್ರೇಮದ ಬಗ್ಗೆ ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ಕೊಟ್ಟು
ಸುಮ್ಮನಾಗುತ್ತಿದ್ದಳು.ಒಂದು ದಿನ ಧೈರ್ಯ ಮಾಡಿ ನವೀನ ಸುಮಾಳ ಎದುರಿಗೆ ತನ್ನ ಪ್ರೀತಿಯ ಪ್ರಸ್ತಾವನ್ನ ಇಟ್ಟಿದ್ದ.
ಆ ವಯಸ್ಸಿನಲ್ಲಿ ಬರೀ ಆಕರ್ಷಣೆಯಾಗಿರುವ ಪ್ರೀತಿಗೆ ಸುಮಾ ಕೂಡ ಒಪ್ಪಿಗೆ ಕೊಟ್ಟಿದ್ದಳು.ಸಂತೋಷವಾಗಿದ್ದ ನವೀನ ತನ್ನ
ಕಾಲೇಜ್ ನ ಕೊನೆಯ ವರ್ಷದಲ್ಲಿ ಏನೋ ಸಾಧನೆ ಮಾಡಿದಂತೆ ಮೆಘನಳ ಹತ್ತಿರ ಹೇಳಿಕೊಳ್ಳುತ್ತಾ ಸಾಗುತ್ತಿದ್ದ.ಮೇಘನ್
ಮಾತ್ರ ಪ್ರೀತಿಯ ವಿಷಯ ಬಂದಾಗ ಏನೂ ಮಾತನಾಡದೆ ಸುಮ್ಮನಾಗುತ್ತಿದ್ದಳು.ಅಂದು ಕಾಲೇಜ್ ನ ಕೊನೆಯ ದಿನ,
ಪರೀಕ್ಷೆಗಳೆಲ್ಲ ಮುಗಿದು ರಿಸಲ್ಟ್ ನ ನೀರಿಕ್ಷೆಯಲ್ಲಿದ್ದರು ಎಲ್ಲ.ಕಾಲೇಜ್ ನ ಕೊನೆಯ ದಿನವಾದ್ದರಿಂದ ಎಲ್ಲ ಸ್ನೇಹಿತರೆಲ್ಲ
ಒಟ್ಟುಗೂಡಿದ್ದರು.ಎಲ್ಲರೂ ಮುಂದಿನ ತಮ್ಮ ಜೀವನ ಬಗ್ಗೆ ಮಾತನಾಡುತ್ತ,ಕಳೆದ ದಿನವನ್ನ ಮೆಲುಕು ಹಾಕುತ್ತ,
ಮತ್ತೆ ಯಾವಾಗ ಸಿಗೋದು ಅಂತಲ್ಲ ಪ್ರಶ್ನೆ ಮಾಡುತ್ತಾ ಚರ್ಚೆಯಲ್ಲಿ ತೊಡಗಿದ್ದರು.ಪರೀಕ್ಷೆಯ ದಿನಗಳಿಂದ ಮಧ್ಯೆ
ಹೆಚ್ಚು ಭೇಟಿಯಾಗದ ಸುಮಾ ಮತ್ತೆ ನವೀನ ಎಲ್ಲರಿಂದ ಸ್ವಲ್ಪ ದೂರ ಒಂದು ಮರದಡಿ ನಿಂತು ಮಾತನಾಡುತ್ತ ಇದ್ದರು.
ಯಾವಾಗಲೂ ಕಾಂಟಾಕ್ಟ್ ಲ್ಲಿ ಇರುವಂತೆ,ಕೆಲಸ ಸಿಕ್ಕ ಮೇಲೆ ತಾನೆ ಬಂದು ನಿಮ್ಮ ಮನೆಯಲ್ಲಿ ನಮ್ಮ ಪ್ರೇಮದ
ವಿಷಯ ಮಾತನಾಡಿ ಮದುವೆಯಾಗೋಣ ಅಂತ ನವೀನ ಆಡಿದ ಮಾತಿಗೆ ನಕ್ಕ ಸುಮಾ ನೀನು ಆ ವಿಷಯವನ್ನ ಅಷ್ಟು
ಮನಸ್ಸಿಗೆ ಹಚ್ಚುಕೊಂಡಿದೀಯ?ನಾನು ಸುಮ್ಮನೆ ಅವತ್ತು ಹಾಗೆ ಅಂದಿದ್ದು,ನೀನಗೆ ನನ್ನ ಮೇಲೆ ಇದ್ದದ್ದು ಬರೀ ಆಕರ್ಷಣೆ
ಮಾತ್ರ ಅದು ಪ್ರೀತಿ ಅಲ್ಲ ನೀನೆ ಕೂತು ವಿಚಾರ ಮಾಡಿ ನೋಡು.ನಾನು ಒಪ್ಪಲಿಲ್ಲ ಅಂತ ಬೇಜಾರಿನಲ್ಲಿ ನಿನ್ನ
ಕಾಲೇಜ್ ನ ಕೊನೆಯ ವರ್ಷ ಹಾಳು ಮಾಡಿಕೊಂಡು ಜೀವನ ಹಾಳಾಗಬಾರದು ಅಂತ ನಾನು ಅವತ್ತು ಸುಳ್ಳು ಹೇಳಿದೆ
ಬೇಜಾರಗಬೇಡ,ಮತ್ತೆ ಸಿಗೋಣ ಅಂತ ಹಿಂದೆ ನೋಡದೆ ಹೋಗಿದ್ದಳು.ಗೊಂದಲದಲ್ಲಿದ್ದ ನವೀನ ಮೆಘನಳನ್ನ ಸಿಗಲು
ಹಾಸ್ಟೆಲ್ ಗೆ ಹೋದಾಗ ಅವಳು ಹಿಂದಿನ ದಿನವೇ ಹಾಸ್ಟೆಲ್ ನಿಂದ ಹೋಗಿದ್ದಳು.ಅವನಿಗಾಗಿ ಇದ್ದ ಒಂದು ಪತ್ರವನ್ನ
ತೆಗೆದುಕೊಂಡು ಹಾಸ್ಟೆಲ್ ನಿಂದ ಹೊರಗಡೆ ಬಂದು ಪತ್ರ ಓದಿದಾಗ ಮೇಘನ ತನ್ನನ್ನ ಪ್ರೀತಿ ಮಾಡುತ್ತಿದ್ದಾಗಿ ತಿಳಿದು
ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದ.ಇದ್ದಕ್ಕಿದ್ದಂತೆ ನಾನು ನಿನಗೆ ಹೇಳದೆ ಹೊರಟುಹೋಗಿದ್ದಕ್ಕೆ ನನ್ನನ್ನ
ಕ್ಷಮಿಸಿಬಿಡು ನವೀನ್.ನನಗೇ ಗೊತ್ತಿಲ್ಲದೇ ನಾನು ನಿನ್ನ ಪ್ರೀತಿ ಮಾಡೋಕೆ ಶುರು ಮಾಡಿದ್ದೆ.
ನಾನು ಹೇಗೆ ನಿನ್ನ ಪ್ರೀತಿ ಮಾಡೋಕೆ ಶುರು ಮಾಡಿದೆ ಅಂತ ನನಗೆ ತಿಳಿಯಲಿಲ್ಲ.ನೀನು ಯಾವಾಗಲೂ ಸುಮಾಳ
ಬಗ್ಗೆ ಹೇಳುತ್ತಿದ್ದಾಗ ನನಗೆ ಏನೋ ಒಂಥರಾ ವಿಚಿತ್ರ ಅನುಭವವಾಗುತ್ತಿತ್ತು ಆಗಲೇ ನನಗೆ ತಿಳಿದಿದ್ದು ನನಗೆ ನಿನ್ನ
ಮೇಲೆ ಪ್ರೀತಿ ಇದೆ ಅಂತ.ಆದರೆ ನನ್ನ ಪ್ರಿತಿಯನ್ನ ಅರ್ಥ ಮಾಡಿಕೊಳ್ಳೋ ಸ್ಥಿತಿಯಲ್ಲಿ ನೀನು ಇರಲಿಲ್ಲ.
ಅದಕ್ಕೆ ನಾನು ನಿನ್ನ ಬಿಟ್ಟು ದೂರ ಹೋಗ್ತಾ ಇದೀನಿ.ಅಂತ ಬರೆದಿದ್ದನ್ನ ಓದಿದ ನವೀನ್ ಏನೊಂದೂ ತೋಚದೆ ಮನೆ
ಕಡೆಗೆ ಹೆಜ್ಜೆ ಹಾಕಿದ್ದ.ಬರೀ ಆಕರ್ಷಣೆಯನ್ನೇ ಪ್ರೀತಿ ಅಂದುಕೊಂಡಿದ್ದ ನವೀನ್ ಗೆ ಈಗ ನಿಜವಾದ ಪ್ರೀತಿ ಅಂದರೇನು
ಅಂತ ತಿಳಿದಿತ್ತು.ಅವಳಿಲ್ಲದೆ ಒಂದು ದಿನವೂ ಇರಲಾರೆ ಅನಿಸತೊಡಗಿತ್ತು ನವೀನ್ ಗೆ.ಇದೆ ಗುಂಗಲ್ಲಿ ಒಂದು ತಿಂಗಳು
ಮನೆ ಬಿಟ್ಟು ಹೊರ ಬರದೆ,ಯಾರೊಡನೆಯೂ ಸರಿಯಾಗಿ ಬೆರೆಯದ ನವೀನ್ ಅಂದು ರಿಸಲ್ಟ್ ಆದ್ದರಿಂದ ಹೊರ ಬಂದಿದ್ದ.
ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಲ್ಲಿ ಪಾಸು ಆಗಿದ್ದ ನವೀನ್ ಶಹರದಲ್ಲಿ ಎರಡು ಮೂರು ಕಂಪನಿಯ ಆಫರ್ ಇದ್ದರಿಂದ ಮತ್ತೂ
ಮೇಘನಾಳ ನೆನಪನ್ನ ಮರೆಯುವ ನಿರ್ಧಾರದಿಂದ ಎಲ್ಲರೊಡನೆ ಇರುವ ಊರನ್ನು ಬಿಟ್ಟು ಶರದೆಡೆಗೆ ನಡೆದಿದ್ದ.
ಸುಮಾರು ಐದು ವರ್ಷಗಳು ಕಳೆದಿದ್ದವು... ನವೀನನನ್ನ ಮರೆಯಲಾಗದೆ ತೊಳಲಾಡುತ್ತಿದ್ದ ಮೇಘನ
ಅವನನ್ನ ಒಮ್ಮೆ ನೋಡುವ ಸಲುವಾಗಿ ಮತ್ತೆ ಕಾಲೇಜ್ ಕಲಿತ ಊರಿಗೆ ಬಂದಾಗ ನವೀನ್ ಮತ್ತು ಅವರ ಮನೆಯವರೆಲ್ಲ
ಐದು ವರ್ಷದ ಹಿಂದೆಯೇ ಊರು ಬಿಟ್ಟು ಹೋಗುವುದಾಗಿ ತಿಳಿದು ಬೇಸರವಾಯಿತು.ಕೆಲವರಿಂದ ನಡೆದ ಘಟನೆಯ ಬಗ್ಗೆ
ಸ್ವಲ್ಪ ಮಟ್ಟಿಗೆ ಮಾಹಿತಿ ತಿಳಿದು ಅವರು ಈಗ ಎಲ್ಲಿದ್ದಾರೆಂದು ತಿಳಿಯದೇ ಹತಾಶೆಯಿಂದ ಹಿಂತಿರುಗಿದ್ದಳು.
ಒಂದು ಕಡೆ ಪ್ರೀತಿ ಏನೆಂದು ತಿಳಿಯದೇ ಪ್ರೀತಿ ಮಾಡಲು ಹೋಗಿ ತನಗಾಗಿ ಕಾಯುತ್ತಿದ ಪ್ರಿತಿಯನ್ನ ಅರಿಯದೇ
ದುಕ್ಕಿಸುತ್ತಿದ್ದ ನವೀನ್,ಇನ್ನೊಂದು ಕಡೆ ಹಿಂದೆ ಮುಂದೆ ನೋಡದೆ ದುಡುಕಿ ತಪ್ಪು ನಿರ್ಧಾರ ತೆಗೆದುಕೊಂಡ ಮೇಘನಾ
ಈ ಘಟನೆ ನಡೆದು ಹದಿನೈದು ವರ್ಷವಾದರೂ ಮದುವೆಯಾಗದೆ ಕಳೆದು ಹೋದ ಪ್ರೀತಿಯ ಹುಡುಕಾಟದಲ್ಲಿದ್ದಾರೆ.