ಕಥೆ

ಪ್ರೀತಿ-ಮನಸುಗಳ ಮಿಲನ


1.
ಈಗಿನ ಮುಂದುವರೆದ ಜಗತ್ತಿನಲ್ಲಿ ಕಂಪ್ಯೂಟರ್ ಇಂಟರ್ನೆಟ್ ಅಂತ ಈ ಕಥೆ ಇಂಟರ್ನೆಟ್ ಅಲ್ಲಿ ಶುರುವಾಗಿ
ಪಾರ್ಕ್ ಅಲ್ಲಿ ಮುಗಿದದ್ದು ನಿಜವಾಗ್ಲೂ ನಂಬಲಾಗದ ವಿಷಯ

ಕಥಾ ನಾಯಕ ವೇಂಕಟೇಶ್ ಅಂದ್ರೆ ನಮ್ಮ ವೆಂಕಿ ಹೆಚ್ಚಿಗೆ ಕಲಿಯದಿದ್ರೂ ಊರು ಬಿಟ್ಟು ಹೈದ್ರಾಬಾದಿಗೆ ಹೋಗಿ ಒಂದು
ಕೆಲಸ ಹುಡುಕಿಕೊಂಡು ತನ್ನ ಸ್ನೇಹಿತರ ಡಿಗ್ರೀ ಮುಗಿಯೋ ವಯಸ್ಸಿನಲ್ಲೇ ಒಂದು ಬೈಕ್ ಒಂದು ಮನೆ
ತಗೊಂಡು ಜೀವನದಲ್ಲಿ ಒಂದು ನೆಲೆಯನ್ನ ಕಂಡಿದ್ದ.ಸ್ವಭಾವ ಮೇಲ್ನೊಟಕ್ಕೆ ಸ್ವಲ್ಪ ಕಠೋರ ಅಂತ ಅನಿಸಿದ್ರೂ
ಒಳಗಿನಿಂದ ತುಂಬಾ ಮೃದು ಸ್ವಭಾವದವನು.ಯಾರನ್ನಾದರೂ ಹಚ್ಚಿಕೊಂಡರೆಅವರ ಸಲುವಾಗಿ ಏನು ಬೇಕಾದರೂ
ಮಾದಲು ಸಿದ್ಧನಾಗಿದ್ದ.ಅಪ್ಪ ಅಮ್ಮ ಎಲ್ಲಾ ಊರಲ್ಲಿ ಇರುವ ಮನೆ ಬಿಟ್ಟು ಹೋಗದೆ ವೆಂಕಿ ಕಳುಹಿಸೋ ಹಣದಲ್ಲೇ
ಚೊಕ್ಕವಾಗಿ ಸಂಸಾರ ನಡೆಸುತ್ತಿದ್ದರು.ವೆಂಕಿ ಓದಿದ್ದು 10ನೇ ತರಗತಿಯಾದರೂ ಗುರುತಿನಿಂದ ಹೈದ್ರಾಬಾದ್ ಗೆ
ಹೋಗಿ ಹಲವಾರು ಬಗೆ ಕೆಲಸ ಮಾಡಿ ಜೀವನದಲ್ಲಿ ಮುಂದೆ ಬಂದಿದ್ದ.ಕೊನೆಗೆ ಒಂದು  officeನಲ್ಲಿ ಕಂಪ್ಯೂಟರ್
 ಒಪರೇಟರ್ ಆಗಿ ಕೆಲಸ ಮಾಡತೊಡಗಿದ್ದ.
               ಆಗಲೇ ಕೆಲವು ಹಳೆಯ ಸ್ನೇಹಿತರ ಮಾತಿನಂತೆ ಇಂಟರ್ನೆಟ್ ನಲ್ಲಿ ಫೇಸ್ ಬುಕ್ ಎಂಬ
ಮಾಯಾಜಾಲಕ್ಕೆ ಬಂದಾಗಿತ್ತು.ಆದರೆ ಈ ಮಾಯಾಜಾಲವೇ ತನ್ನ ಜೀವನದಲ್ಲಿ ಒಂದು ದಿನ ದೊಡ್ಡ ದುರಂತವನ್ನೇ
ಎದುರಿಗಿಡುತ್ತೆ ಎಂಬ ಪರಿವೆ ಕೂಡ ಅವನಿಗೆ ಇರಲಿಲ್ಲ.ಗೆಳೆಯರಿಂದ ದೂರವಾಗಿದ್ದ ವೆಂಕಿಗೆ ಬಹಳ ದಿನಗಳ ನಂತರ
ಹಳೆಯ ಸ್ನೇಹಿತರ ಸಂಪರ್ಕದಲ್ಲಿ ಬಂದದ್ದು ಅವನಿಗೆ ಹೋಸ ಚೈತನ್ಯವನ್ನ ನೀಡಿದಂತಾಗಿತ್ತು.ಇಂಟರ್ನೆಟ್ ನಲ್ಲಿ
ಬಗೆ ಬಗೆಯ ವೈವಿಧ್ಯತೆಯನ್ನ ಕಂಡು ಬೆರಗಾಗಿದ್ದ ವೆಂಕಿ.ಏನೋ ಹಳೆಯ ಗೆಳೆಯರು ಸಿಗುತ್ತಾರೆ ಅಂತ
ಫೇಸ್ ಬುಕ್ ಗೆ ಬಂದಿದ್ದ ವೆಂಕಿಗೆ ಅದರಲ್ಲಿ ಬೆರೆಯುತ್ತಾ ಆ ಮಾಯಾಜಾಲದ ಸಾಗರದಲ್ಲಿ ಮುಳುಗಿದ್ದೂ ಕೂಡ ಅವನ
ಅರಿವಿಗೆ ಬರಲಿಲ್ಲ.ದಿನದಲ್ಲಿ ಒಂದು ಬಾರಿಯಾದರೂ ಅದನ್ನ ನೋಡದಿದ್ದರೆ ನಿದ್ರೆಯೂ ಬರದಂತಾಗಿತ್ತು.ಹಳೆಯ
ಮಿತ್ರರ ಜೋತೆ ಹೊಸ ಹೊಸ ಜನರ ಪರಿಚಯವಾಗಿ ಅವರ ಜೊತೆ ಬೆರೆತು ಹೋಗಿದ್ದ.ಹೀಗೆ ಹಲವಾರು ಗೆಳೆಯ
ಗೆಳತಿಯರ ಜೊತೆ ನಲಿದಾಡುತ್ತಾ ತಾನು ಎಲ್ಲರಿಂದ ದೂರದಲ್ಲಿರದೇ ಎಲ್ಲರ ಜೊತೆಗೆ ಇರುವ ಭಾವನೆಯೊಂದಿಗೆ
ಹಲವಾರು ದಿನಗಳು ಕಳೆದವು.
             ಏಂದೂ ಹುಡುಗಿಯರ ಸುದ್ದಿಗೆ ಹೊಗದ ವೆಂಕಿ ಸ್ನೇಹಿತರ ಮಾತು ಕೇಳಿ ಹೆದರುತ್ತಾ ಹುಡುಗಿಯರ
ಜೊತೆ ಬೆರೆಯತೊಡಗಿದ್ದ.ಆಗಿನ್ನೂ 22ರ ಹರೆಯದ ವೆಂಕಿ ಎಂದೂ ಪ್ರೀತಿ ಪ್ರೇಮ ಎಂಬುದರ ಬಗ್ಗೆ ಯೊಚನೆ
ಕೂಡ ಮಾಡಿದವನಲ್ಲ.ಇದುವರೆಗೂ ಜೀವನದಲ್ಲಿ ಒಂದು ನೆಲೆಯನ್ನ ಗಳಿಸುವುದು ಅವನ ಧ್ಯೇಯವಾಗಿತ್ತು.
ಈಗ ಆ ಕನಸೆಲ್ಲ ನನಸಾಗಿದ್ದು ತನಗೂ ಒಬ್ಬ ಪ್ರೇಯಸಿ ಬೇಕು ಅಂತ ಅವನ ಮನಸ್ಸು ಹೇಳತೊಡಗಿತ್ತು.
ಅವನ ಗೆಳೆಯರೆಲ್ಲಾ ದಿನವೂ ಒಂದೊಂದು ಹುಡುಗಿಯರ ವಿಷಯ ಮಾತನಾಡುವುದನ್ನ ಕೇಳಿ ಅವನಿಗೂ ನಾನು
ಯಾರನ್ನಾದರೂ ಪ್ರೀತಿಸಬೇಕು ಅನಿಸತೊಡಗಿತು.ಆದರೆ ಇದೇ ಪ್ರೀತಿ ಅನ್ನೋ ಎರಡಕ್ಷರ ತನ್ನ ಜೀವನದಲ್ಲಿ ದೊಡ್ಡ
ಬಿರುಗಾಳಿಯನ್ನೇ ಎಬ್ಬಿಸಬಹುದು ಅಂತ ಯೋಚನೆ ಕೂಡ ಅವನಿಗೆ ಬಂದಿರಲಿಲ್ಲ ಬಹುಶ:.


2.
ಗೆಳೆತನದಲ್ಲಿ ಬಹಳ ನಂಬಿಕೆ ಇಟ್ಟಿದ್ದ ವೆಂಕಿ ತನ್ನ ಅತೀ ಹತ್ತಿರದ ಸ್ನೇಹಿತರಾದ ಗುರು ಮತ್ತು ಕಿರಣ್ ಅವರ
ಜೊತೆ ದಿನವೂ ಫೋನಲ್ಲಿ ಮಾತಾಡ್ತಾ  ಇದ್ದ.ಈ ಮೂವರೂ ಮೂರು ದೇಹ ಒಂದೇ ಜೀವದಂತಿದ್ದರು.
ಮೂವರೂ ಜೀವನದ ಪ್ರತಿಯೋಂದು ವಿಷಯವನ್ನ ತಮ್ಮ ತಮ್ಮಲ್ಲಿ ಹೇಳಿಕೊಳ್ಳುತ್ತಿದ್ದರು.ಗುರು ಬೆಂಗಳೂರಿನಲ್ಲಿ
ಒಂದು ಸೋಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡ್ತ ಇದ್ದ.ಕಿರಣ ಅಪ್ಪ ಮಾಡಿಟ್ಟ ದುಡ್ಡಿನಲ್ಲಿ ಐಶ್ ಮಾಡ್ತಾ ಏನು ಕೆಲಸ
ಮಾಡೋದು ಅಂತ ಯೋಚನೆ ಮಾಡೋದರಲ್ಲೇ ದಿನ ಕಳೆಯುತ್ತಿದ್ದ.ವೆಂಕಿ ಎರಡು ದಿನಕ್ಕೊಮ್ಮೆಯಾದ್ರೂ
ಗೆಳೆಯರಿಗೆ ಫೋನ್ ಮಾಡ್ತಾ ಇದ್ದ.ಕಿರಣ್ ಯಾವಗಲೂ ಹುಡುಗಿಯರ ಬಗ್ಗೆ ಮಾತ್ರ ಮಾತಾಡ್ತ ಇದ್ದ.
ದಿನವೂ ಒಂದೊಂದು ಹೊಸ ಹುಡುಗಿಯರ ಬಗ್ಗೆ ಹೇಳ್ತಾ ಅವಳು ಫೋನ್ ಮಾಡ್ತಾಳೆ ಇನ್ನೋಬ್ಬಳು ಮೆಸೆಜ್
ಮಾಡ್ತಾಳೆ ಅಂತಾ ಇದ್ದ.ಹೊರಗಿಂದ ಆಯ್ತು ಮಗ ಎಂಜಾಯ್ ಮಾಡು ಅನ್ನೋ ವೆಂಕಿ ಮನಸ್ಸಿನಲ್ಲೇ ಕಿರಣ್ ಗೆ ಏನೂ
ಇಲ್ಲದಿದ್ರೂ ಹುಡುಗಿಯರು ಅವನ ಹಿಂದೆ ಬೀಳ್ತಾರೆ ನಾನು ಎಲ್ಲ ರೀತಿಯಿಂದಲೂ ಜೀವನದಲ್ಲಿ ಒಂದು ಗುರಿಯನ್ನ
ಮುಟ್ಟಿದೀನಿ ನನಗ್ಯಾರೂ ಹುಡುಗಿಯರು ಲೈಕ್ ಮಾಡೋಲ್ಲ ಅಂತ ಚಿಂತೆ ಮಾಡ್ತಾ ಇದ್ದ.ವೆಂಕಿಗೆ ಕಿರಣ್ ಗಿಂತ
ಗುರುನ ಬಗ್ಗೆ ಜಾಸ್ತಿ ಒಲುಮೆ.ಗುರು ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ.ಜೀವನದಲ್ಲಿ ಯಾವಾಗಲೂ
ಮುಂದೆ ಬರುವ ಗುರಿ ಇದ್ದ ಗುರುಗೆ ವೆಂಕಿ "ಯಾವಾಗಲೂ ಜೀವನದಲ್ಲಿ ಗುರಿ ಮುಖ್ಯ ನಂತರ ಎಲ್ಲ ಸಿಗುತ್ತೆ"
ಅಂತ ಇದ್ದ.ಆದರೆ ಒಂದು ದಿನ ಗುರು "ಮಚಾ ಜೀವನದಲ್ಲಿ ಬರೀ ಗುರಿ ಇದ್ದು ಅದನ್ನ ಸಾಧಿಸಿದರೆ ಎಲ್ಲಾ ಸಿಗುತ್ತೆ
ಅನ್ನೋ ಮಾತು ಸುಳ್ಳು ಏನೂ ಇಲ್ಲದಿದ್ದವರೂ ಕೂಡ ಜೀವನದಲ್ಲಿ ಐಶ್ ಮಾಡ್ತಾ ಇದಾರೆ"ಅಂತ ಹೇಳಿದ್ದ,
ಅದರಲ್ಲೂ ಕಿರಣ್ ಐಶ್ ಮಾಡ್ತಾ ಇರೋದು ನೋಡಿ ವೆಂಕಿಗೆ ಅದು ಸ್ವಲ್ಪ ಮಟ್ಟಿಗೆ ನಿಜ ಅಂತ ಅನಿಸಿತ್ತು.
                 ನೋಡಲು ಅಷ್ಟೇನೂ ಸುಂದರವಾಗಿರದ ವೆಂಕಿ ತನ್ನ ನಡುವಳಿಕೆಯಿಂದ  ಎಲ್ಲರ ಮನ ಗೆದ್ದಿದ್ದ.
ಯಾವಾಗಲೂ ನಗುನಗುತ್ತ ತಮಾಷೆ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.ವೆಂಕಿಗೆ ಬೈಕ್ ಅಂದರೆ ತುಂಬಾ
ಅಚ್ಚುಮೆಚ್ಚು,ಬೈಕಲ್ಲಿ ಸ್ಟಂಟ್ ಮಾಡೋದು ಅಂದ್ರೆ ಅವನಿಗೆ ನೀರು ಕುಡಿದಂತೆ ಸಲೀಸಾಗಿತ್ತು.ತನ್ನ ಹಲವಾರು
ಸ್ಟಂಟ್ ನ ವೀಡಿಯೊಗಳನ್ನ ಫೇಸ್ ಬುಕ್ ಲ್ಲಿ ಹಾಕಿ ಎಲ್ಲರ ಹೊಗಳಿಕೆಗೂ ಪಾತ್ರನಾಗಿದ್ದ.ಪ್ರೀತಿ ಪ್ರೀತಿ ಅಂತ
ಹಂಬಲಿಸುತ್ತಿದ್ದ ವೆಂಕಿ ಎಲ್ಲರಂತಿರಲಿಲ್ಲ,ಅವನಿಗೆ ತೋರಿಕೆಯ ಪ್ರೀತಿ ಅವನ ಸ್ಟಂಟ್ ಅಥವಾ ಆಸ್ತಿ ನೋಡಿ ಬರುವ
ಹುಡುಗಿಯರು ಬೇಕಾಗಿರಲಿಲ್ಲ.ಎಷ್ಟೋ ಹುಡುಗಿಯರು ಅವನ ಸ್ಟಂಟ್ ಮೆಚ್ಚಿ ನಾನು ನಿನ್ನ ಫ್ಯಾನ್ ಅಂತೆಲ್ಲ ಅಂದ್ರೂ
ಅವನು ಅದನ್ನ ಅಷ್ಟೇನೂ ಸೀರಿಯಸ್ ಆಗಿ ಪರಿಗಣಿಸಿರಲಿಲ್ಲ.ಪ್ರೀತಿ ಅಂದ್ರೆ ಎರಡು ಮನಸುಗಳ ಮಿಲನ ಅದು
ಬರೀ ತೋರಿಕೆಯಾಗಿರದೇ ನೈಜವಾಗಿರಬೇಕು ಅಂತ ಪ್ರೀತಿ ನನಗೆ ಬೇಕು ಅಂತ ಹುಡುಕಾಡ್ತಾ ಇದ್ದ.
ಗುರು ಮತ್ತು ಕಿರಣ್ ಹಲವಾರು ಹುಡುಗಿಯರ ಬಗ್ಗೆ ಹೇಳಿದರೂ ಯಾರೂ ಅವನಿಗೆ ಹಿಡಿಸಿರಲಿಲ್ಲ.ಅವರಿಬ್ಬರೂ
ಜೀವನದಲ್ಲಿ ಎಂಜಾಯ್ ಮಾಡು ಅಂದ್ರೆ ನಂಗೆ ಜೀವನದಲ್ಲಿ ಎಂಜಾಯ್ ಮಾಡೋದು ಮುಖ್ಯ ಅಲ್ಲ
ನನ್ನನ್ನ ನನ್ನ ಅಪ್ಪ ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳೋ ಹುಡುಗಿ ಬೇಕು ಅಂತ ಹೇಳ್ತಾ ಇದ್ದ.
                     ಪ್ರಿತಿಗಾಗಿ ಹಂಬಲಿಸುತ್ತಿದ್ದ ವೆಂಕಿಯ ನಡತೆಯಲ್ಲಿ ಆದ ಹಲವಾರು ಬದಲಾವಣೆಯನ್ನ
ಗುರು ಗುರುತಿಸತೊಡಗಿದ್ದ."ಯಾಕೋ ಇತ್ತೀಚೆಗೆ ನೀನು ತುಂಬಾ ಬದಲಾಗಿದ್ದೀಯ ಇಷ್ಟೆಲ್ಲಾ ಚಿಂತೆ ಮಾಡೋದು
ಒಳ್ಳೆದಲ್ಲಾ ನಮ್ಮ ಹಣೆಯಲ್ಲಿ ಬರೆದಿರೋರು ನಮಗೆ ಸಿಕ್ತಾರೆ,ನೀನು ಹುಡುಕೋ ಹುಡುಗಿಗಿಂತ ನಿಮ್ಮ ಮನೆಯವರು
ಹುಡುಕೋ ಹುಡುಗಿ ನಿನ್ನನ್ನ ಕೂಡ ಅರ್ಥ ಮಾಡಿಕೊಂಡು ಒಳ್ಳೆ ಸಂಸಾರ ಮಾಡೋಳು ಆಗಿರಬಹುದಲ್ಲಾ"
ಅಂತ ಹೇಳಿದ್ದು ಕೂಡ ವೆಂಕಿಯ ಗಮನಕ್ಕೆ ಬಂದಿರಲಿಲ್ಲ,ಸದ್ಯ ವೆಂಕಿಯದು ಒಂದೇ ಗುರಿಯಾಗಿತ್ತು -ಪ್ರೀತಿ.
ತನಗೆ ಬೇಕಾದ ಪ್ರಿತಿಯನ್ನ ಹುಡುಕೋದು.ಈ ವಿಚಾರದಲ್ಲಿ ಅವನಿಗೆ ಸ್ವಲ್ಪ ಮಟ್ಟಿಗೆ ಹಸಿವೆ ನಿದ್ರೆಯೂ
ಕೂಡ ಬೇಡದಂತಾಯಿತು.ಗೆಳೆಯರ ಜೊತೆ ಬೇರೆಯುವದು ಕೂಡ ಕಡಿಮೆಯಾಯಿತು.ದಿನವೂ ಕಿರಣ್ ಗೆ
ಫೋನ್ ಮಾಡಿ ಏನು ಮಾಡಬೇಕು ಅಂತ ಗಂಟೆಗಟ್ಟಲೆ ಹೊತ್ತು ಮಾತಾಡುತ್ತಿದ್ದ.ಮಾಡೋ ಕೆಲಸದಲ್ಲೂ ಕೂಡ
ಗಮನವಿರದೆ ಈ ನಡುವೆ ಎರಡು-ಮೂರು ಬಾರಿ ಆಫೀಸ್ ನಲ್ಲಿ ತಲೆ ತಗ್ಗಿಸಿದ್ದೂ ಆಯಿತು.ಇವನನ್ನ ಬದಲಾಯಿಸೋಣ
ಅಂತ ಗುರು ಮಾಡುತ್ತಿದ್ದ ಪ್ರಯತ್ನಗಳೂ ಕೂಡ ವ್ಯರ್ಥವಾದವು.ಒಳ್ಳೆಯದನ್ನೇ ಹೇಳುತ್ತಿದ್ದ ಗುರುನಂತ ಅತೀ
ಹತ್ತಿರದ ಸ್ನೇಹಿತನನ್ನೇ ವೆಂಕಿ ತಿರಸ್ಕರಿಸತೊಡಗಿದ.ನಿನಗೆ ನಾನು ಹೇಳೋ ವಿಷಯದಿಂದ ಬೇಜಾರಾಗಿದ್ರೆ
ಕ್ಷಮಿಸಪ್ಪ ಅಂತ ಹೇಳಿ ದೇವರು ಒಳ್ಳೆಯದನ್ನ ಮಾಡಲಿ ಅಂತ ಹೇಳಿ ಗುರು ಸುಮ್ಮನಾದ.

"ಓ ನನ್ನ ಮನದರಿಸಿಯೇ ನೀ ಎಲ್ಲಿರುವೇ??
ನಿನ್ನೀ ಹುಡುಕಾಟದಲ್ಲೇ ದಿನ ಕಳೆದಿವೆ..
ನೀನಿಲ್ಲದ ಜೀವನ ಮರಳುಗಾಡಿನಂತಾಗಿದೆ
ನೀ ಬಂದು ತಬ್ಬಿ ಜೀವನ ಗೀತೆ ಹಾಡಬೇಕಾಗಿದೆ."

ಎಂದೂ ಒಂದು ವಿಷಯ ಕೂಡ ಬರೆಯದ ವೆಂಕಿ ಕವನ ಬರೆದು ಫೇಸ್ ಬುಕ್ ಲ್ಲಿ ಪೋಸ್ಟ್ ಮಾಡಿದ್ದ.
ಯಾವಾಗಲೂ ಆಫೀಸ್ ನಲ್ಲಿ ಕೂತು fb ಓಪನ್ ಮಾಡುತ್ತಿದ್ದ ವೆಂಕಿ ಮಧ್ಯದಲ್ಲೇ ಬಂದ ರವಿವಾರಕ್ಕೆ ಬಯ್ಯುತ್ತಾ,
ರವಿವಾರದಂದು ಏನೋ ಕಳೆದುಕೊಂಡಂತೆ ಪರಿತಪಿಸುತ್ತಾ ಅಂತೂ ರವಿವಾರ ಕಳೆದು ಸೋಮವಾರದಂದು
ಕೆಲಸಕ್ಕೆ ಒಂದು ಗಂಟೆ ಮುಂಚೆನೇ ಬಂದು ಕಂಪ್ಯೂಟರ್ ಆನ್ ಮಾಡಿ fb ಓಪನ್ ಮಾಡಿದಾಗ
ಏನೋ ಕಂಡು ಬೆರಗಾದವನಂತೆ ನೋಡತೊಡಗಿದ.

"ಜೀವನವೆಂಬುದು ಮರಳುಗಾಡಿನಂತೆ
ಪ್ರೀತಿ ಎಂಬುದು ನೀರ ಚಿಲುಮೆಯಂತೆ
ಜೀವನ ಸಾಗುತಿರಲಿ ನಿಮ್ಮ ನೇರ ಗುರಿಯೆಡೆಗೆ
ಚಿಲುಮೆ ಸಿಗುವುದು ಮುಗಿಯುವುದರೊಳಗೆ ನಿಮ್ಮ ನಡಿಗೆ.

ಜೀವನವೆಂಬ ಮರಳುಗಾಡಿನಲ್ಲಿ ಬರೀ ಚಿಲುಮೆಗಾಗಿ ನಡೆಯದೆ ನಿಮ್ಮ ಗುರಿ ತಲುಪಲು ನಡೆಯುತ್ತಾ ಇರಿ,
ಒಂದು ದಿನ ತಂತಾನೇ ಚಿಲುಮೆ ಸಿಗುತ್ತೆ."ಈ ರೀತಿ ಅವನ ಕವನಕ್ಕೆ ನೀಡಿದ ಪ್ರತಿಕ್ರಿಯೆ ನೋಡಿ
"ಇವಳೇ ಅವಳು ನಾನು ಹುಡುಕುತ್ತಿದ್ದ ನನ್ನ ಮನದರಸಿ "ಅಂತ ಯೋಚನೆ ಮಾಡಿದಂತಿತ್ತು.
ಅವನ ಮುಖದಲ್ಲಿ ಮಂದಸ್ಮಿತ ಕಾಣುತ್ತಿತ್ತು.
ಯಾರಾಕೆ?? ಅವಳೇ  ಅವಳೇ ---- ರಶ್ಮಿ.


3.
ಅಂದು ವೆಂಕಿ ತುಂಬಾ ಖುಷಿಯಾಗಿದ್ದ.ಅವನಿಗೆ ತಾನು ಹುಡುಕುತ್ತಿದ್ದ ಹುಡುಗಿ ಸಿಕ್ಕಳು ಅಂತ ಅನಿಸಿತ್ತು.
ತನ್ನ ಕವನಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದ ರಶ್ಮಿ ಯಾರಂತ ಅವಳ ಪ್ರೊಫೈಲ್ ನೋಡಿದ.
"ಐಶ್ವರ್ಯ ರೈ ಅಲ್ಲದಿದ್ರೂ ಸಾಧಾರಣವಾದ ಮುಖಚರ್ಯೆ,ತುಂಬಿದ ಗಲ್ಲಗಳು,ಪ್ರೀತಿ ಅಂತ ಮಾಡಿದ್ರೆ
ಅದು ನಿನ್ನನ್ನೇ ಅಂತ ಹೇಳಲು ತಯಾರಾಗಿದ್ದ ತುಟಿ,ಚಿಕ್ಕ ಮೂಗು,ನನ್ನ ಕೂಗನ್ನೇ ಆಲಿಸುತ್ತಿದ್ದ ಕಿವಿ,
ನನ್ನನ್ನ ಕಂಡ ಸಂತಸದಲ್ಲಿ ನೀನೆ ನನ್ನ ನಲ್ಲ ಅಂತನೋಡುತ್ತಿದ್ದ ಕಣ್ಗಳು "ತನ್ನದೇ ನೀರೀಕ್ಷೆಯಲ್ಲಿರುವಂತೆ
ಕಂಡಂತಾಯಿತು ಅವಳ ಫೋಟೋ.ಒಮ್ಮೆಲೇ ಸಾವಿರಾರು ವಿಚಾರಗಳು ಸುಳಿದು ಹೋದವು ವೆಂಕಿಯ ಮನದಲ್ಲಿ.
ಹಲೋ ವೆಂಕಟೇಶ್ ಅಂತ ಅವಳೇ ಕರೆದಂತಾಯಿತು.ಇದ್ದಕ್ಕಿದಂತೆ ಅವಳು ಬಂದು ಅಪ್ಪಿದಂತಾಯಿತು .
ಯಾರೋ ವೆಂಕಿನ ಅಲುಗಾಡಿಸಿದಂತಾಯಿತು,ಒಮ್ಮೆಲೇ ಹೌಹಾರಿದ ವೆಂಕಿ ಎದುರಿಗಿದ್ದ ಬಾಸನ್ನ ನೋಡಿ
ಒಮ್ಮೆಲೇ ದಂಗಾದ.ಗುಡ್ ಮಾರ್ನಿಂಗ್ ಅಂತ ವಿಶ್ ಮಾಡೋದನ್ನ ಕೂಡ ಮರೆತು ಎರಡು ನಿಮಿಷ
ದಂಗುಬಡಿದವನಂತೆ ನಿಂತಿದ್ದ ವೆಂಕಿ."ಇತ್ತೀಚೆಗೆ ನಿಮ್ಮ ಗಮನ ಕೆಲಸದಲ್ಲಿರದೆ ಬೇರೆಲ್ಲೋ ಇರುತ್ತೆ,
ಸರಿಯಾಗಿ ಕೆಲಸ ಮಾಡಿ ಇಲ್ಲದಿದ್ದರೆ ಕೆಲಸ ಕಳ್ಕೊತೀರಾ" ಅಂತ ಬಾಸ್ ಹೇಳಿ ಒಳಗೆ ಹೋದದ್ದು
ಕೂಡ ಅವನ ಗಮನಕ್ಕೆ ಬಂದಿರಲಿಲ್ಲ.ಒಮ್ಮೆಗೆ ಭೂಮಿಗೆ ಬಂದಂತಾಗಿ ಏನೂ ಹೊಳೆಯದಂತೆ ಎರಡು ನಿಮಿಷ
ಕಣ್ಮುಚ್ಚಿ ಕುಳಿತು ಮತ್ತೊಮೆ ಅವಳ ಫೋಟೋ ನೋಡಿ ಏನೋ ಕಳೆದು ಹೋದ ವಸ್ತು ಸಿಕ್ಕಂತಾಗಿ ನಗುತ್ತಾ
ಅವಳ ಪ್ರೊಫೈಲ್ ಚೆಕ್ ಮಾಡತೊಡಗಿದ.ಇವನಿಗಿಂತ ಕೇವಲ 2 ತಿಂಗಳಿಗಿಂತ ಚಿಕ್ಕವಳಾದ ಅವಳು
ಮೂಲತಃ ರಾಯಚೂರಿನವಳು.ಸದ್ಯ ಅವಳು ಬೆಂಗಳೂರಿನಲ್ಲಿ ಒಂದು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ
ಮಾಡುತ್ತಿದ್ದಾಳೆ ಅಂತ ತಿಳಿಯಿತು.ತಕ್ಷಣವೇ ವೆಂಕಿಗೆ ಹೊಳೆದಿದ್ದು ಕಿರಣ್ ವಿಷಯ.ಲವ್ವಲ್ಲಿ phd ಮಾಡಿದ್ದ ಕಿರಣ್ ಗೆ
ಫೋನ್ ಮಾಡಿದ್ರೆ ಮುಂದೇನು ಮಾಡಬೇಕು ಅಂತ ತಿಳಿಯುತ್ತೆ ಅಂತ ತಕ್ಷಣವೇ ಆಫೀಸ್ ನಿಂದ ಹೊರಬಂದು
ಫೋನ್ ಮಾಡಿ ನಡೆದ ವಿಷಯವನ್ನೆಲ್ಲ ತಿಳಿಸಿದ.ಆ ಕಡೆಯಿಂದ ಕಿರಣ್ ಕೂಡ ಏನೇನೋ ಹೇಳತೊದಗಿದ್ದ.
ಅಂತೂ ಇಂತೂ ಒಂದು ಗಂಟೆಗಳ ಕಾಲ ನಡೆದ ಸಂಭಾಷಣೆ ಕೊನೆಗೆ ನಾನಿದೀನಿ ನೀನೇನೂ ಹೆದರಬೇಡ
ಅಂತ ಕಿರಣ್ ಹೇಳುವುದರೊಂದಿಗೆ ಇಬ್ಬರ ಮಾತುಕತೆ ಮುಗಿದಿತ್ತು. 
        ತಿರುಗಿ ಆಫೀಸ್ ಗೆ ಬಂದ ವೆಂಕಿ ಅವಳಿಗೆ ಫ್ರೆಂಡ್ ರಿಕ್ವೆಸ್ಟ್ ಹಾಕಿ ಅವಳ ಬಗ್ಗೆ ವಿಚಾರ ಮಾಡುತ್ತಾ
ತನ್ನ ಕೆಲಸದಲ್ಲಿ ಮಗ್ನನಾದ.ಅರ್ಧ ಅರ್ಧ ಗಂಟೆಗೊಮ್ಮೆ fbಚೆಕ್ ಮಾಡುತ್ತಾ ಅವಳು ರಿಕ್ವೆಸ್ಟ್ ಅಕ್ಸೆಪ್ಟ್
ಮಾಡಿದಾಳೋ ಇಲ್ವೋ ಅಂತ ನೋಡುತ್ತ ದಿನ ಕಳೆಯಿತು.ಸಂಜೆ ಹೊತ್ತಿಗೆ ಮತ್ತೆ ಬೇಸರದಿಂದ ಮನೆಗೆ
ಬಂದು ಅವಳ ವಿಚಾರದಲ್ಲೇ ಸರಿಯಾಗಿ ಊಟಾನೂ ಮಾಡದೆ ಹಾಸಿಗೆಯಲ್ಲಿ ಹೊರಳಿ ಮಲಗಿದ.ಮರುದಿನ
ಮತ್ತೆ ಆಫೀಸ್ ಗೆ ಬಂದು fbಓಪನ್ ಮಾಡಿ ನೋಡಿದಾಗ ಅವಳು ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿ ಹಾಯ್
ಎಂದು ಮೆಸೇಜ್ ಮಾಡಿದ್ದನ್ನ ನೋಡಿ ಖುಷಿಯಾಗಿ ತಾನೂ ಹಾಯ್ ಎಂದು ಮೆಸೇಜ್ ಕಳುಹಿಸಿ ಅವಳು ಆನ್ಲೈನ್
ಇದ್ದದ್ದು ನೋಡಿ ಮಾತನಾಡಿ ಪ್ರಪೋಸ್ ಮಾಡಿ ಅವಳು ಒಮ್ಮೆಲೇ ದಂಗಾಗಿ ಕೊನೆಗೆ ಅವಳೂ ಐ ಲವ್ ಯು
ಅಂತ ಹೇಳಿದಾಗ ಇವನ ಸಂತೋಷಕ್ಕೆ ಕೊನೆಯೇ ಇಲ್ಲದಂತಾಯಿತು.ಅಷ್ಟರಲ್ಲೇ ಮೊಬೈಲ್ ಅಲಾರಂ
ಆಗಿ ಒಮ್ಮೆಲೇ ಬೆಚ್ಚಿ ಬಿದ್ದು ಎದ್ದ ವೆಂಕಿ ಕಣ್ಣೋರಿಸಿಕೊಂಡು ನೋಡಿದಾಗ ತಾನು ಈವರೆಗೂ ಕಂಡದ್ದು
ಕನಸು ಎಂದು ಅರಿವಾದಾಗ ಸ್ವಲ್ಪ ಬೇಸರವಾಗಿ,ಆದರೂ ತಾನು ಏನನ್ನೋ ಜಯಿಸಿದಂತಾಗಿ ಎದ್ದು
ತಯಾರಾಗಿ ತಿಂಡಿ ತಿಂದು ಆಫೀಸ್ ಗೆ ಬಂದು fbನೋಡಿದಾಗ ಹೇಗಿತ್ತೋ ಹಾಗೆ.ಅವಳು ಇನ್ನೂ
ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿರಲಿಲ್ಲ.ಬೇಸರದಿಂದ ವೆಂಕಿ ಅವಳು ಮತ್ತೆಲ್ಲಾದರೂ ಕಾಮೆಂಟ್ ಏನಾದರೂ
ಮಾಡಿದಾಳಾ ಅಂತ ಚೆಕ್ ಮಾಡಿ ಎಲ್ಲೂ ಏನೂ ಕಾಣದಿದ್ದಾಗ ಸರಿ ಅವಳು ಇನ್ನೂ fb ಓಪನ್ ಮಾಡಿಲ್ಲ
ಅನ್ನೋದನ್ನ ಖಾತರಿ ಪಡಿಸಿಕೊಂಡ.ಕಳೆದ ದಿನದಂತೆ ಅರ್ಧ ಗಂಟೆಗೊಮ್ಮೆ fb ಚೆಕ್ ಮಾಡುತ್ತಾ
ಕೆಲಸದಲ್ಲಿ ತೊಡಗಿದ.ವೆಂಕಿ ರಶ್ಮಿ ಬಗ್ಗೆ ಯೋಚನೆ ಮಾಡುತ್ತಲೇ ಎರಡು ದಿನ ಕಳೆದು ಹೋಯ್ತು.
ಇಷ್ಟರೊಳಗೆ 8-10 ಬಾರಿ ಕಿರಣ್ ಗೆ ಫೋನ್ ಮಾಡಿ ಕೊರೆದದ್ದೂ ಆಯಿತು.
                        ಅಂದು ಗುರುವಾರ ದಿನದಂತೆ ವೆಂಕಿ ಆಫೀಸ್ ಗೆ ಬಂದು ಓಪನ್ ಮಾಡಿ ಕುಳಿತು
ದಿನದಂತೆ ಕೆಲಸದಲ್ಲಿ ತೊಡಗಿದ್ದ.ಸುಮಾರು 3 ಗಂಟೆಯಾಗಿತ್ತು,ಇಷ್ಟವಿಲ್ಲದೆ ವೆಂಕಿ ಕೆಲಸ ಮಾಡುತ್ತ ಇದ್ದ.
ಸರನ್ನ ಕೇಳಿ ಮನೆಗೆ ಹೋಗೋಣ ಅಂತ ನಿರ್ಧಾರ ಮಾಡಿದ ವೆಂಕಿ ಯಾವುದಕ್ಕೂ ಒಮ್ಮೆ fb ಚೆಕ್ ಮಾಡಿ
ನೋಡಿದಾಗ ಅವಳು ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದು ತಿಳಿಯಿತು.ಅವಳು ಆನ್ಲೈನ್ ಇರೋದು ನೋಡಿ ಒಮ್ಮೆಲೇ
ಏನ್ ಮಾಡ್ಬೇಕು ಅಂತ ತಿಳಿಯದೆ 10 ನಿಮಿಷ ಬಿಟ್ಟು ತಾನೆ ಮೆಸೇಜ್ ಕಳುಹಿಸಿದ.
ವೆಂಕಿ-Hai ...
ರಶ್ಮಿ-hello
ವೆಂಕಿ-had lunch
ರಶ್ಮಿ-ya you ??
ವೆಂಕಿ-ya. how are you ?
ರಶ್ಮಿ-fine
ವೆಂಕಿ-ಏನು ತುಂಬಾ ದಿನದ ಮೇಲೆ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ರಿ..?
ರಶ್ಮಿ-ನಾನು ಊರಿಗೆ ಹೋಗಿದ್ದೆ ಅದ್ಕೆ ಆಗಿರಲಿಲ್ಲ.
ವೆಂಕಿ-ok ok
ರಶ್ಮಿ-k bye now i m living c u later
ವೆಂಕಿ-bye tc.
ಅಂತೂ ನಮ್ಮ ವೆಂಕಿ ಜೀವನದಲ್ಲಿ ಏನೋ ದೊಡ್ಡ ಸಾಧನೆ ಮಾಡಿದವಂತೆ ತಕ್ಷಣ ಕಿರಣ್ ಗೆ
ಫೋನ್ ಮಾಡಿ ಈ ವಿಷಯ ಹೇಳಿ  ಮುಂದೆ ಏನು ಮಾಡ್ಬೇಕು ಅಂತ ಕೇಳ್ದ.ಇದೆ ರೀತಿ ದಿನಾ ಅವಳ
ಜೊತೆ ಚಾಟ್ ಮಾಡಿ ಒಂದು ದಿನ ಪ್ರಪೋಸ್ ಮಾಡು ಅಂತ ಕಿರಣ್ ಹೇಳಿದ.ಎರಡು ದಿನಗಳ ಕಾಲ ವೆಂಕಿ
ರಶ್ಮಿ ಜೊತೆ ಚಾಟಿಂಗ್ ಮಾಡಿ ಇಬ್ಬರೂ ತುಂಬಾ ಕ್ಲೋಸ್ ಆದರು.ವೆಂಕಿ ರಶ್ಮಿ ಬಗ್ಗೆ ವಿಚಾರಿಸಿ ಅವಳ ಬಗ್ಗೆ, 
ಅವರ ಮನೆಯವರ ಬಗ್ಗೆ ಎಲ್ಲ ಕೇಳಿ ತಿಳ್ಕೊಂಡ.ರಶ್ಮಿ ಕೂಡ ಮೃದು ಸ್ವಭಾವದ ಹುಡುಗಿ ಆಗಿದ್ದು ಅವಳು ಕೂಡ
ವೆಂಕಿ ವಿಷಯದಲ್ಲಿ ತುಂಬಾನೇ ಹತ್ತಿರವಾಗಿವೆಂಕಿ ಜೊತೆ ತುಂಬಾ ಸಲಿಗೆಯಿಂದ ಇದ್ದಳು.
ವೆಂಕಿ ಅವಳ ಕನಸಲ್ಲೇ ಕವನಗಳನ್ನ ಗೀಚತೊದಗಿದ್ದ.
                         ಅಂದು ಸೋಮವಾರ ವೆಂಕಿ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ದೇವಸ್ಥಾನಕ್ಕೆ
ಹೋಗಿ ದೇವರಿಗೆ ನಮಸ್ಕಾರ ಮಾಡಿ ಇವತ್ತು ರಶ್ಮಿಗೆ ಪ್ರಪೋಸ್ ಮಾಡುವುದಾಗಿಯೂ ನನಗೆ ಅದರಲ್ಲಿ
ಯಶಸ್ಸು ಸಿಗಲಪ್ಪ ಅಂತ ದೇವರಲ್ಲಿ ಬೇಡಿಕೊಂಡು ಆಫೀಸ್ ಗೆ ಬಂದು ಎಂದಿನಂತೆ fb ಓಪನ್ ಮಾಡಿ ಅವಳಿಗಾಗಿ
ಕಾಯತೊಡಗಿದ್ದ.ಅವಳಿಗಾಗಿ ಒಂದು ಕವನ ತಯಾರು ಮಾಡಿ ಒಂದು ಮೆಸೇಜನ್ನು ರೆಡಿ ಮಾಡಿಟ್ಟಿದ್ದ.
ಸುಮಾರು 10 ಗಂಟೆ ಹೊತ್ತಿಗೆ ಅವಳು ಆನ್ಲೈನ್ ಬಂದು ಹಾಯ್ ಅಂತ ಮೆಸೇಜ್ ಮಾಡಿದ್ಲು.
ವೆಂಕಿ ಕೂಡ ಅದಕ್ಕೆ ಉತ್ತರಿಸುತ್ತ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದರು.

ವೆಂಕಿ-ಮತ್ತೇನು ಸಮಾಚಾರ ರಶ್ಮಿ?
ರಶ್ಮಿ-ಏನಿಲ್ಲ ಎಲ್ಲ ನೀನೆ ಹೇಳ್ಬೇಕು.
ವೆಂಕಿ-ಏನಿಲ್ಲ ಒಂದು ವಿಷಯ ಹೇಳಬೇಕಿತ್ತು,ಹೇಗೆ ಹೇಳ್ಬೇಕು ಅಂತ ಗೊತ್ತಾಗ್ತಾ ಇಲ್ಲ...
ರಶ್ಮಿ-ಏನೋ ಅದು ನನ್ ಹತ್ರ ಹೇಳಲ್ವಾ? ಫ್ರೆಂಡ್ ಹತ್ರ ಏನು ಮುಚ್ಚು ಮರೆ ಹೇಳು ಪರವಾಗಿಲ್ಲಾ..
ವೆಂಕಿ-

"ನಿನ್ನೀ ನೋಟಕೆ ಮನ ಸೋಲದವರಾರಿಲ್ಲ.
ಈ ನೋಟದಲ್ಲೇ ನನ್ನ ಮನ ಸೆಳೆದೆಯಲ್ಲ.
ನಿನ್ನ ಪ್ರೀತಿಗೆ ನಾ ಹಂಬಲಿಸುತ್ತಿರುವೆನಲ್ಲ
ಮನದರಸಿ ಆಗು ಎಂದು ಬೇಡುತಿರುವೆ"ನಲ್ಲ"

ನಿನ್ನ ನೋಟಕೆ ಮನ ಸೋತೆ ನಾ.
ನಿನ್ನ ಪ್ರೀತಿಗೆ ತಲೆ ಬಾಗುವೆ ನಾ.
ಒಮ್ಮೆ ನನ್ನ ಪ್ರೀತಿಸುವೆ ಅಂತ ಹೇಳು ನೀ
ನಿನ್ನೆಲ್ಲ ಆಸೆಯ ಪೂರೈಸುವೆ ನಾ.

ನೋಡು ರಶ್ಮಿ ಯಾವತ್ತು ನೀನು ನನ್ನ ಪೋಸ್ಟ್ ಗೆ ಕಾಮೆಂಟ್ ಮಾಡಿದ್ಯೋ ಅವತ್ತೇ ನಾನು
ನಿನ್ನ ಪ್ರಿತಿಸೋಕೆ ಶುರು ಮಾಡ್ದೆ.ನಾನು ಎಷ್ಟೋ ಜನ ಹುಡುಗಿಯರನ್ನ ನೋಡ್ದೆ ಆದ್ರೆ ಮೊದಲನೇ
ಬಾರಿಗೆ ನಿನ್ನ ಫೋಟೋ ನೋಡಿದ ತಕ್ಷಣಾನೇ  ನಂಗೆ ಯಾಕೋ ನೀನೇ ನನ್ನ ಪ್ರೇಯಸಿ ಅಂತ ಅನಿಸಿಬಿಡ್ತು.
ನಿಜವಾಗಲೂ ನಿನ್ನ ಬಿಟ್ಟು ಇರಲಾರೆ ಅನ್ನೋ ಸ್ಥಿತಿಲಿ ನಾನಿದೀನಿ.ನೋಡು ನಾನು ಈಗಾಗಲೇ ಗಾಡಿ
ಮನೆ ಎಲ್ಲ ತಗೊಂಡು ಜೀವನದಲ್ಲಿ ಒಂದು ಒಳ್ಳೆ ಸ್ಥಾನ ಗಳಿಸಿದಿನಿ.ನಾನು ನಿನಗೆ ಯಾವುದೇ ರಿತಿಲೂ
ಕಡಿಮೆ ಆಗದ ಹಾಗೆ ನೋಡ್ಕೋತೀನಿ.ನೀನಿಲ್ಲದೆ ನನ್ನ ಜೀವನ ಮತ್ತೆ
ಮರಳುಗಾಡಿನಂತಾಗೋದು ನಿಜ. I LOVE YOU ರಶ್ಮಿ ..I Love You..."
ರಶ್ಮಿ-ಏನು ಹೇಳ್ತಾ ಇದ್ದೀಯ ವೆಂಕಿ ??
ವೆಂಕಿ-ನಿಜ ರಶ್ಮಿ ನಾನು ನಿನ್ನನ್ನ ತುಂಬಾ ಪ್ರೀತಿಸ್ತಾ ಇದೀನಿ...ಇಲ್ಲ ಅನ್ನಬೇಡಾ ಪ್ಲೀಸ್..
   ಸ್ವಲ್ಪ ಹೊತ್ತು ಎರಡೂ ಕಡೆಯಿಂದ ಯಾರೂ ಮೆಸೇಜ್ ಮಾಡಲಿಲ್ಲ.ಕೊನೆಗೆ ವೆಂಕಿಯೇ ಏನಾಯ್ತು ಅಂತ ಕೇಳಿದ.
   ನಂತರ ಬಂದ ಅವಳ ಮೆಸೇಜ್ ನೋಡಿ ವೆಂಕಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು........4.
ನೋಡು ವೆಂಕಿ ನಾನು ಇದುವರೆಗೂ ನಿನ್ನನ್ನ ಒಳ್ಳೆ ಫ್ರೆಂಡ್ ಅಂತ ಮಾತ್ರ ನೋಡಿದ್ದು.
ಅದನ್ನ ಬಿಟ್ಟು ಬೇರೇನೂ ಇಲ್ಲ.ನಾನು ನಿನ್ನನ್ನ ಯಾವತ್ತೂ ಆ ಭಾವನೆಯಿಂದ ಕಂಡೇ ಇಲ್ಲ.
ನನಗೆ ಈ ಪ್ರೀತಿ ಪ್ರೇಮ ಇದರಲ್ಲೆಲ್ಲ ನಂಬಿಕೆ ಇಲ್ಲ.ನನಗೆ ಅದನ್ನ ಕಂಡ್ರೆ ಕೂಡ ಆಗೋಲ್ಲ.
ಈ ವಿಷಯದಲ್ಲಿ ನನ್ನನ್ನ ಮತ್ತೇನೂ ಕೇಳಬೇಡ.ನಾವಿಬ್ಬರು ಒಳ್ಳೇ ಫ್ರೆಂಡ್ ಮಾತ್ರ ಆಗಿರೋಕೆ ಸಾಧ್ಯ.
ಅದನ್ನ ಬಿಟ್ಟು ಈ ಪ್ರೀತಿ ಪ್ರೇಮ ಅಂತ ಮಾತ್ರ ಹೇಳಬೇಡ.
ನಾನು ಹೇಳೋ ವಿಷಯದಿಂದ ನಿನಗೆ ಹರ್ಟ್ ಆಗಿದ್ರೆ i m sorry ....

ಈ ರೀತಿ ರಶ್ಮಿ ಮಾಡಿದ ಮೆಸೇಜ್ ನೋಡಿ ವೆಂಕಿಗೆ ಆಘಾತವಾಗಿತ್ತು.ಅವನಿಗೆ ಏನು ಮಾಡಬೇಕು
ಅಂತ ತೋಚದೆ ತಲೆ ಮೇಲೆ ಕೈ ಹೊತ್ತು ಅವಳಿಗೆ ಬೈ ಅಂತ ಮೆಸೇಜ್ ಮಾಡಿ ಆಫೀಸ್ ಇಂದ
ಹೊರಟೇ ಹೋದ.ಅಲ್ಲಿಂದ ಹೊರಟವನು ಅಲ್ಲೇ ಹತ್ತಿರದಲ್ಲಿ ಇದ್ದ ಒಂದು ಪಾರ್ಕಿಗೆ ಬಂದು ಕಲ್ಲಿನ
ಬೆಂಚಿನ ಮೇಲೆ ಕುಳಿತು ಮುಂದೇನು ಅಂತ ವಿಚಾರ ಮಾಡೋಕೆ ಶುರು ಮಾಡಿದ.ಆಗ ನೆನಪಿಗೆ
ಬಂದದ್ದು ಕಿರಣ್.ತಕ್ಷಣ ಕಿರಣ್ ಗೆ ಫೋನ್ ಮಾಡ್ದ ವೆಂಕಿ. ಮಚಾ ಎಲ್ಲ ಮುಗಿದು ಹೋಯ್ತು ಅವಳು
ಈ ರೀತಿಯಾಗಿ ಹೇಳಿದಳು ಮಗಾ ಅಂತ ಅಳೋಕೆ ಶುರು ಮಾಡ್ದ.ಅದನ್ನ ಕೇಳಿ ಕಿರಣ್ ಆ ವಿಷಯನ
ಅಷ್ಟು ಸೀರಿಯಸ್ ಆಗಿ ತಗೊಳೋದಾ ಬಿಟ್ಟಾಕು ಮಗಾ ಅವಳಿಲ್ಲಾಂದ್ರೆ ಇನ್ನೊಬ್ಬಳು,ಅವಳೇನೂ
ಐಶ್ವರ್ಯ ರೈಯ್ಯಾ??ಬಿಡು ಮಗಾ ಅಂದಿದ್ದು ಕೇಳಿ ಏನೋ ಅಸಹ್ಯ ಎನಿಸಿ ಫೋನ್ ಕಟ್ ಮಾಡಿದ ವೆಂಕಿ.
ಹುಡುಗಿಯರು ಅಂದ್ರೆ ಬರೀ ಟೈಮ್ ಪಾಸ್ ಅನ್ಕೊಂಡಿರೋ ಅವನ ಹತ್ರ ತನ್ನ ಲವ್ ಸ್ಟೋರಿ ಹೇಳಿ ಅದನ್ನ
ನಾನೇ ಹಾಳ್ ಮಾಡ್ಕೊಂಡೆ ಅನ್ಸೋಕೆ ಶುರುವಾಯಿತು.ಆಗ ವೆಂಕಿಗೆ ನೆನಪಾಗಿದ್ದು ಗುರುತನ್ನ
ಒಳ್ಳೆಯದಕ್ಕೇ ಅಂತ ಹೇಳುತ್ತಿದ್ದ ಗುರುನ ನಾನೇ ತಿರಸ್ಕರಿಸಿದೆ ಅನ್ನೋ ಬೇಜಾರಾಯ್ತು ವೆಂಕಿಗೆ,
ಆದರೆ ಬೇರೆ ದಾರಿ ತೋಚದೆ ಗುರುಗೆ ಫೋನ್ ಮಾಡಿ ಹಲೋ ಎಂದ..
ಗುರು-ಏನ್ ವೆಂಕಿ ತುಂಬಾ ದಿನದ ಮೇಲೆ ಫೋನ್ ಮಾಡಿದಿಯಾ..
ವೆಂಕಿ-ಏನೂ ಇಲ್ಲ ಸುಮ್ನೆ(ತನ್ನ ಲವ್ ವಿಷ್ಯ ಹೇಳೋ ಧೈರ್ಯ ಕೂಡ ಇರಲಿಲ್ಲ ವೆಂಕಿಗೆ)
ಗುರು-ಸುಮ್ನೆನಾ ನಂಗೊತ್ತಿಲ್ವಾ ಯಾವ್ದೋ ಹುಡುಗಿ ಹಿಂದೆ ಬಿದ್ದಿದಿಯಂತೆ ನಂಗೆ ವಿಷಯ
        ಹೇಳಿಲ್ಲ ಅಂದ್ರೆ ಗೊತ್ತಾಗಲ್ಲ ಅಂತ ತಿಳ್ಕೊಂದ್ಯಾ??
         ಎನಿ ವೆ  ಬೆಸ್ಟ್ ಆಫ್ ಲಕ್.
ಮುಂದೆ  ವೆಂಕಿಗೆ ಏನು ಮಾತಾಡಬೇಕು ಅಂತ ತೋಚದೆ ಸುಮ್ನಾದ.ಇವನ ಮೌನ ಅರ್ಥ
ಮಾಡ್ಕೊಂಡ ಗುರು ಏನಾಯ್ತು ಮಚಾ ಯಾಕೆ ಸುಮ್ನಾದೆ ಹೇಳು ಮಗಾ ಅಂದ.ಆಗ ವೆಂಕಿ ನಡೆದ
ಎಲ್ಲಾ ವಿಷಯವನ್ನ ಗುರುಗೆ ಹೇಳಿದ.ಗುರುಗೆ ಕೂಡ ಒಮ್ಮೆಗೆ ನಂಬಿಕೆ ಬರಲಿಲ್ಲ.ಆದರೆ ವೆಂಕಿಯ ಅವಸ್ಥೆ
ನೋಡಿ ಅವನಿಗೂ ಏನು ಹೇಳಬೇಕು ಅಂತ ತಿಳಿಯಲಿಲ್ಲ.ನೀನು ಏನೂ ಚಿಂತೆ ಮಾಡಬೇಡ ನಾವಿದೀವಿ
ಮುಂದೇನು ಮಾಡೋದು ಅಂತ ವಿಚಾರ ಮಾಡೋಣ ಅಂತ ಹೇಳಿದ್ದನ್ನ ಕೇಳಿ sorry ಗುರು ನಾನು
ನಿನ್ನನ್ನ ಅರ್ಥ ಮಾಡ್ಕೊಳ್ಳಲಿಲ್ಲ ಅಂದ ವೆಂಕಿ.ಇರ್ಲಿ ಬಿಡು ವೆಂಕಿ ಫ್ರೆಂಡ್ ಶಿಪ್ ಲಿ ಸಾರೀ ಎಲ್ಲಾ ಯಾಕೆ
ಅಂದ ಗುರು.ಮಗಾ ಈಗ ನಂಗೆ ಸ್ವಲ್ಪ ಕೆಲಸ ಇದೆ ನಾನು ಸಂಜೆ ಕಾಲ್ ಮಾಡ್ತೀನಿ,ನೀನು ಏನೂ ಬೇಜಾರು
ಮಾಡ್ಕೋಬೇಡ ಎಲ್ಲಾ ಸರಿಹೋಗುತ್ತೆ ಈಗ ನಿನ್ನ ಕೆಲಸ ನೋಡು ಬೈ ಅಂತ ಫೋನಿಟ್ಟ.
                 ಆದರೆ ವೆಂಕಿ ಎಲ್ಲರಂತಿರಲಿಲ್ಲ,ಅವನು ತುಂಬಾ ಎಮೋಷನಲ್ ಆದರೂ ವಿಷಯವನ್ನ
ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾದ ನಿರ್ಧಾರವನ್ನ ತಗೋತಾ ಇದ್ದ.ಸಂಜೆಯವರೆಗೆ ಪಾರ್ಕಲ್ಲೇ
ಕೂತು ಕೊನೆಗೆ ಒಂದು ನಿರ್ಧಾರಕ್ಕೆ ಬಂದ ವೆಂಕಿ.ಸಂಜೆ ಏಳಾಗಿದ್ದು ನೋಡಿ ವೆಂಕಿ ಕಣ್ಣೋರಿಸಿಕೊಂಡು
ಎದ್ದು ಮನೆ ಕಡೆ ಹೆಜ್ಜೆ ಹಾಕಿದ.ಮನೆಗೆ ಬಂದು ಸ್ನಾನ ಮಾಡಿ ಸ್ವಲ್ಪ ಊಟ ಮಾಡೋ ಹೊತ್ತಿಗೆ ಗುರುನ ಫೋನ್
ಬಂತು.ಫೋನನ್ನ ರಿಸಿವ್ ಮಾಡದೆ ಕಟ್ ಮಾಡಿ ನನ್ನ ಪ್ರಾಬ್ಲಮ್ ನ ನಾನೇ ಸಾಲ್ವ್ ಮಾಡ್ಕೊಂಡು
ನಾನೇ ಫೋನ್ ಮಾಡ್ತೀನಿ ಅಂತ ಮೆಸೇಜ್ ಮಾಡಿದ.ಅಂದು ಬೇಗ ಮಲಗಿದ ವೆಂಕಿ ಬೆಳಿಗ್ಗೆ
ಬೇಗ ಎದ್ದು ಎಂದಿನಂತೆ ಆಫೀಸ್ ಗೆ ಹೋಗಿ fb ಓಪನ್ ಮಾಡಿ ಅವಳಿಗೆ ಮೆಸೇಜ್ ಮಾಡಿದ..

"ನಾನು ಯಾವತ್ತು ಮೊದಲನೇ ದಿನ ನಿಮ್ಮ ಫೋಟೋ ನೋಡಿದ್ನೋ ಅವತ್ತೇ ನೀವು ನನಗೆ ಇಷ್ಟ ಆದ್ರಿ,
ನಾನು ತುಂಬಾ ದಿನದಿಂದ ಹುಡುಕ್ತಾ ಇದ್ದ ಹುಡುಗಿ ನೀವೇ ಅಂತ ಅನಿಸ್ತು.ಯಾಕೋ ಗೊತ್ತಿಲ್ಲ ನೀವಿಲ್ಲದೆ
ನನ್ನ ಜೀವನ ಇಲ್ಲ ಅಂತ ಏನೇನೋ ಕನಸು ಕಂಡೆ,ಆದರೆ ನಿಮ್ಮನ್ನ ಒಂದು ಮಾತು ಕೂಡ ಕೇಳದೆ
ಏನೇನೋ ವಿಚಾರ ಮಾಡಿದ್ದು ನನ್ನ ತಪ್ಪು.ಇರಲಿ ಬಿಡಿ ನಾನು ಹಿಂದೆ ಮುಂದೆ ವಿಚಾರ ಮಾಡದೇ
ಏನೇನೋ ಮಾತಾಡ್ಬಿಟ್ಟೆ, ಇನ್ಮುಂದೆ ನಂಗೆ ನಿಮ್ಮ ಜೊತೆ ಮಾತಾಡೋಕೂ ಯಾಕೋ ಮುಜುಗರ.
ನನ್ನನ್ನ ಕ್ಷಮಿಸಿ ಬಿಡಿ.ನಾನು ಜೀವನದಲ್ಲಿ ಮೊದಲು ಇಷ್ಟ ಪಟ್ಟಿದ್ದು ನಿಮ್ಮನ್ನೇ ನೀವೇ ಹೀಗೆ ಹೇಳಿಬಿಟ್ರಿ ..
ನಿಮ್ಮ ನೆನಪು ನಂಗೆ ಮತ್ತೆ ಯಾವಾಗಲೂ ಕಾಡಬಾರದು ಅದಕ್ಕೆ ನಾನು ಈ ಫೇಸ್ ಬುಕ್ ನ ಬಿಟ್ಟು
ಹೋಗ್ತಾ ಇದೀನಿ.ದಯವಿಟ್ಟು ನನ್ನನ್ನ ಕ್ಷಮಿಸಿಬಿಡಿ.ನಾನೇ ನಿಮ್ಮನ್ನ ಬಿಟ್ಟು ದೂರ ಹೋಗ್ತಾ ಇದೀನಿ.
ಮತ್ತೆ ಯಾವುದೇ ರೀತಿ ನನ್ನನ್ನ ಕಾಂಟಾಕ್ಟ್ ಮಾಡೋಕೆ ಪ್ರಯತ್ನ ಪಡಬೇಡಿ.ಮತ್ತೇನಾದರೂ
ನೀವು ನನ್ನನ್ನ ಕಾಂಟಾಕ್ಟ್ ಮಾಡಿದಲ್ಲಿ ನೀವು ನನ್ನನ್ನ ಲವ್ ಮಾಡೋವರೆಗೂ ನಾನು ಬಿಡಲ್ಲ..
ತಪ್ಪು ತಿಳ್ಕೊಬೇಡಿ.
ಕೊನೆಯದಾಗಿ ನಾನು ನಿಮಗಾಗಿ ಅಂತ ಬರೆದ ಕವನಗಳಿವು ನಿಮ್ಮ ಜೊತೆಗೆ ಅದೂ ಮರೆಯಾಗಲಿ ಅಂತ ಕಳಿಸ್ತಾ ಇದೀನಿ..

ನಿನ್ನ ನೋಟಕೆ ಮನ ಸೋತವ ನಾ
ನಿನ್ನ ಚೆಲುವಿಗೆ ಕುರುಡಾದವ ನಾ.
ನಿನ್ನ ಸೌಂದರ್ಯಕೆ  ತಲೆ ಬಾಗಿದವ ನಾ
ನಿನ್ನ ಹೆಜ್ಜೆಗೆ ಗೆಜ್ಜೆ ಸದ್ದಾದವ  ನಾ.

ನೀ ಕನ್ನಡಿಯೆದುರು ನಿಂತು ನಾಚಲು
ಕನ್ನಡಿಯಲ್ಲಿ ನಿನ್ನ ಪ್ರತಿಬಿಂಬ ಕಾಣದಂತಾದೆ ನಾ.

ನೀನಿಲ್ಲದ ಬಾಳು ನನಗೆ ಬೇಕಿಲ್ಲ ಚೆಲುವೆ.
ನಿನಗಾಗಿ ಸೋತು ಬಳಲಿರುವೆ ನಾ.

ಏನೆಂದು ಹೊಗಳಲಿ ಓ ನನ್ನ ರಷ್ಮಿಯೇ
ನಿನಗಾಗಿ ಜೀವವ ಮುಡಿಪಾಗಿಟ್ಟಿರುವೆ ನಾ.

ಬೈ" ಅಂತ ಹೇಳಿ ತನ್ನ fb ಅಕೌಂಟ್ ನ ಡಿಲೀಟ್ ಮಾಡ್ದ ವೆಂಕಿ...
ನಂತರ ಮನೆಗೆ ಬಂದ ವೆಂಕಿ ಗುರುಗೆ ಫೋನ್ ಮಾಡಿ ನಡೆದ ಎಲ್ಲಾ ವಿಷಯವನ್ನ ಹೇಳಿದ,
ಆಗ ಗುರು ಯಾಕೆ ಹಾಗೆ ಮಾಡೋಕೆ ಹೋದೆ ತುಂಬಾ ದುಡುಕಿಬಿಟ್ಟೆ ಹಾಗೆ ಮಾಡಬಾರದಿತ್ತು ಅಂದ.
ಆದರೆ ವೆಂಕಿ ತನ್ನ ನಿರ್ಧಾರ ತನಗೆ ಸರಿ ಅನಿಸಿದೆ ಎಂದಿದ್ದರಿಂದ ಗುರು ಮತ್ತೇನೂ ಹೇಳದೆ
ಆಯ್ತಪ್ಪ ಎಂದಿದ್ದ.ಮಾರನೆ ದಿನ ಮೆಸೇಜ್ ನೋಡಿದ ರಶ್ಮಿಗೆ ಏನು ಮಾಡಬೇಕು ಅಂತ ತೋಚಲೇ ಇಲ್ಲ..
ನನ್ನಿಂದ ಒಬ್ಬ ಒಳ್ಳೇ ಫ್ರೆಂಡ್ ದೂರ ಆದ ಅನ್ನೋ ಬೇಜಾರು ಅವಳಿಗೆ.ವೆಂಕಿನ ತುಂಬಾನೇ ಹಚ್ಚಿಕೊಂಡಿದ್ದ
ರಶ್ಮಿಗೆ ಅವನ ಅಕೌಂಟ್ ತೆಗೆಯೋಕೆ ಹೋದಾಗ ಅವನು ಅಕೌಂಟ್ ಡಿಲೀಟ್ ಮಾಡಿದ್ದು ಗೊತ್ತಾಯ್ತು.
ಹೇಗಾದರೂ ಮಾಡಿ ಅವನ ಕಾಂಟಾಕ್ಟ್ ಮಾಡಬೇಕು ಅನ್ಕೊಂಡು ಅವನು ಯಾವಾಗಲೂ
ಹೇಳುತ್ತಿದ ಅವನ ಕ್ಲೋಸ್ ಫ್ರೆಂಡ್ ಕಿರಣ್ ಗೆ ಮೆಸೇಜ್ ಮಾಡಿ ವೆಂಕಿಯ ನಂಬರ್ ತಗೊಂದ್ಳು..
ಆದರೆ ವೆಂಕಿಗೆ ಫೋನ್ ಮಾಡೋ ಧೈರ್ಯ ಇರಲಿಲ್ಲ ರಶ್ಮಿಗೆ.ಆದರೆ ಮಾತಾಡದೇ ಬೇರೆ ಪರ್ಯಾಯವೇ
ಇಲ್ಲದಿದ್ದರಿಂದ ಅವನಿಗೆ ಮೆಸೇಜ್ ಮಾಡಿದಳು ರಶ್ಮಿ.5.
"ನೀನು ನನ್ನ ಒಳ್ಳೆ ಫ್ರೆಂಡ್ ಅಂತ ಅನ್ಕೊಂಡಿದ್ದೆ ವೆಂಕಿ,ಆದರೆ ನೀನು ಮಾಡಿದ್ದು ಸರಿ ಅಲ್ಲ.
ನೀನು ಪ್ರಪೋಸ್ ಮಾಡಿದ್ದು ನನಗೇನೂ ಬೇಜಾರಿಲ್ಲ,ನೀನು ನಿನ್ನ ಮನಸ್ಸಿನಲ್ಲಿ ಇರೋದನ್ನ
ಹೇಳಿದೆ ಅಷ್ಟೇ.ಅದರಿಂದ ನನಗೇನೂ ಬೇಜಾರಿಲ್ಲ,ಆದ್ರೆ ನೀನು ನಿನ್ನ ಅಕೌಂಟ್ ನ
ಡಿಲೀಟ್ ಮಾಡಿದ್ದು ಸ್ವಲ್ಪಾನೂ ಸರಿ ಇಲ್ಲ.ನಾನು ನನ್ನ ಒಳ್ಳೆ ಫ್ರೆಂಡ್ ನ ಕಳಕೊಂಡೆ.
ಲವರ್ ಆಗಿ ಅಲ್ಲದಿದ್ರೂ ಒಳ್ಳೆ ಫ್ರೆಂಡ್ ಆಗಿ ಇರಬಹುದಿತ್ತು ಆಲ್ವಾ..."
ರಶ್ಮಿ ಮೆಸೇಜ್ ಓದಿದ ವೆಂಕಿ "ನೋಡಿ ನಾನು ನಿಮ್ಮನ್ನ ನನ್ನ ಪ್ರೇಯಸಿಯಾಗಿ ನೋಡ್ಬೇಕು
ಅನ್ಕೊಂಡಿದ್ದೆ ,ಆದ್ರೆ ಅದು ಆಗಲಿಲ್ಲ ನೀವು ನನ್ನ ಫ್ರೆಂಡ್ ಆಗೋಕೆ ಸಾಧ್ಯ ಇಲ್ಲ.
ನಾನು ನಿಮ್ಮನ್ನ ಮರೀಬೇಕು ಅಂತ ಆ ನಿರ್ಧಾರ ತಗೊಂಡಿದ್ದು,
ದಯವಿಟ್ಟು ಮತ್ತೆ ನನಗೆ ಮೆಸೇಜ್ ಮಾಡ್ಬೇಡಿ ಪ್ಲೀಸ್" ಅಂತ ರಿಪ್ಲಾಯ್ ಮಾಡಿದ.
"as ur wish venki,but i missed my best friend"
ಈ ರೀತಿ ರಶ್ಮಿ ಕಳುಹಿಸಿದ ಮೆಸೇಜ್ ನ ಡಿಲೀಟ್ ಮಾಡಿ ಸುಮ್ಮನಾದ ವೆಂಕಿ.ಇದೆಲ್ಲ ವಿಷಯ
ತಿಳಿದ ಕಿರಣ್ ಮತ್ತು ಗುರು ವೆಂಕಿಗೆ ನೀನು ಪದೇ ಪದೇ ಮೆಸೇಜ್ ಮಾಡೋದಲ್ವ ಅದರಿಂದ
ಅವಳಿಗೆ ನಿನ್ನ ಮೇಲೆ ಪ್ರೀತಿ ಹುಟ್ಟಬಹುದಲ್ವಾ?ಅಂತೆಲ್ಲ ಹೇಳೋಕೆ ಶುರು ಮಾಡಿದ್ರು.ಆದರೆ ವೆಂಕಿ
ಅವರನ್ನೆಲ್ಲ ಸುಮ್ಮನಿರಿಸೋಕೆ "ಇನ್ಮುಂದೆ ನಾನಾಗಿ ಅವಳಿಗೆ ಮೆಸೇಜ್ ಮಾಡೋಕೆ ಹೋಗಲ್ಲ,
ಆದರೆ ಮತ್ತೇನಾದರೂ ಅವಳು ಮೆಸೇಜ್ ಮಾಡಿದ್ರೆ ಬಿಡೋಲ್ಲ"ಅಂದ.ಆಗ ಗುರು ಸರಿ,ಅವಳಾಗಿ
ಮತ್ತೆ ಮೆಸೇಜ್ ಮಾಡಿದ್ರೆ ನೀನು ಬಿಡಲ್ಲಾ ತಾನೇ?ಮಾತಿಗೆ ತಪ್ಪಬಾರದು ಅಂತ ಗುರು ಹೇಳಿದ್ದಕ್ಕೆ
ಆಯ್ತಪ್ಪ ಅಂದು ಸುಮ್ನಾಗಿದ್ದ ವೆಂಕಿ.
               ಈ ವಿಷಯವನ್ನ ಸೀರಿಯಸ್ ಆಗಿ ತಗೊಂಡಿದ್ದ ಗುರು ತನ್ನ ಫ್ರೆಂಡ್ ಸಲುವಾಗಿ
ಏನಾದ್ರೂ ಮಾಡಬೇಕು ಅನ್ಕೊಂಡು ರಶ್ಮಿಗೆ ಮೆಸೇಜ್ ಮಾಡಿ "ನೋಡಿ ರಶ್ಮಿ ಅವರೇ
ನಿಮ್ಮ ಮತ್ತು ವೆಂಕಿ ನಡುವೆ ಏನಾಯ್ತೋ ಗೊತ್ತಿಲ್ಲ,ನಾನು ವೆಂಕಿ ಫ್ರೆಂಡ್ ಆಗಿ ಹೇಳ್ತಾ ಇದೀನಿ ವೆಂಕಿ
ನಿಮ್ಮಿಂದ ತುಂಬಾ ತೊಂದರೆಗೆ ಸಿಕ್ಕಿದ್ದು ನಿಜ.ನಿಮಗೆ ಪ್ರೀತಿ ಪ್ರೇಮ ಇದರ ಬಗ್ಗೆ ನಂಬಿಕೆ ಇಲ್ಲಾಂದ್ರೆ ಬಿಡಿ,
ಆದ್ರೆ ಒಮ್ಮೆ ಅವನಿಗೆ ನೀವು ಅಂದ್ರೆ ನನಗಿಷ್ಟ ಆದ್ರೆ ಈಗ ನಾನು ಪ್ರೀತಿ ಪ್ರೇಮ ಅಂತ ಹೋಗೋಕೆ ಆಗಲ್ಲ,
ನನ್ನ ಸಧ್ಯದ ಪರಿಸ್ಥಿತಿ ನಿಮಗೆ ಗೊತ್ತಿಲ್ಲ ಅಂತೇನಾದ್ರೂ ಮೆಸೇಜ್ ಮಾಡಿ,ಮುಂದಿನದ್ದು ನಾವು ನೋಡ್ಕೊತಿವಿ.
ಸಧ್ಯ ಅವನನ್ನ ದುಃಖದಿಂದ ಹೊರತರೋದು ಮುಖ್ಯ.ಒಮ್ಮೆ ಅವನು ಸರಿ ಹೋದ ಅಂದ್ರೆ ನಾವು ಅವನಿಗೆ
ತಿಳಿ ಹೇಳ್ತಿವಿ"ಅಂದಿದ್ದ.ಎರಡು ದಿನ ಯೋಚನೆ ಮಾಡಿ ರಶ್ಮಿ ಕೊನೆಗೆ ವೆಂಕಿಗೆ ಮೆಸೇಜ್ ಮಾಡಿ
ಗುರುಗೂ ಹೇಳಿದಳು.
        ತಕ್ಷಣ ಗುರು ವೆಂಕಿಗೆ ಫೋನ್ ಮಾಡಿ ಅವಳು ಮತ್ತೆ ಮೆಸೇಜ್ ಮಾಡಿದಾಳೆ ಅದು ಹೇಗೆ ಏನು
ಅಂತೆಲ್ಲ ಕೇಳಬೇಡ..ಇನ್ನು ಮುಂದಿನದು ನೀನು ನೋಡ್ಕೋ.ಮತ್ತೆ ಅವಳ ಸುದ್ದಿಗೆ ಹೋಗಲ್ಲ ಅಂದ್ರೆ ಓದಿತೀನಿ.
ಸುಮ್ನೆ ಅವಳ ಹಿಂದೆ ತಗಲಾಕ್ಕೋ.ಅವಳಿಗೆ ಮೆಸೇಜ್ ಮಾಡಿ ಕಾಡ್ತಾ ಇರು,ಖಂಡಿತ ಅವಳು ನಿನ್ನನ್ನ ಒಪ್ಕೊತಾಳೆ
ಅಂದಿದ್ದಕ್ಕೆ ಆಯ್ತಪ್ಪ ಅಂತ ಹೇಳಿ ವೆಂಕಿ ಫೋನ್ ಕಟ್ ಮಾಡಿದ್ದ .ಮತ್ತೆ ಮುಗುಳ್ನಗುತ್ತ ವೆಂಕಿ ಅವಳಿಗೆ
ಏನಂತ ಮೆಸೇಜ್ ಮಾಡೋದು ಅಂತ ಯೋಚನೆ ಮಾಡತೊಡಗಿದ.

"ನಾನಾಗಿ ನಿಮ್ಮಿಂದ ದೂರ ಹೋಗೋಣ ಅಂತಿದ್ರೆ ಬೆನ್ನು ಬಿದ್ದ ಬೇತಾಳನಂತೆ ನೀವೇ ನನ್ನ
ಹಿಂದೆ ಬೀಳ್ತಾ ಇದ್ದೀರಾ,ನಿಮಗೆ ನಾನು ಮೊದಲೇ ಹೇಳಿದ್ದೆ ನನ್ನ ಕಾಂಟಾಕ್ಟ್ ಮಾಡೋಕೆ
ಪ್ರಯತ್ನ ಪಡಬೇಡಿ ಅಂತ ಆದರೆ ನೀವು ಕೇಳಿಲ್ಲ..ಇನ್ನು ನಾನು ನಿಮ್ಮನ್ನ ಬಿಡಲ್ಲ ಕಣ್ರೀ"
ಅಂತ ವೆಂಕಿ ಅವಳಿಗೆ ಮೆಸೇಜ್ ಮಾಡಿದ ಅಂತಾಯ್ತು.ಇವೆಲ್ಲದೊರೊಳಗೆ ಸುಮಾರು
8 -10 ದಿನ ಕಳೆದಿದ್ದರಿಂದ ತನ್ನ ಆಫೀಸ್ ನಲ್ಲಿ ಉಳಿದ ಕೆಲಸ ಮಾಡುವುದರಲ್ಲಿ ಮಗ್ನನಾಗಿದ್ದ.
ಇದ್ದಕ್ಕಿದ್ದಂತೆ ಮೊಬೈಲ್ ಧ್ವನಿ ಕೇಳಿದ ವೆಂಕಿ ಯಾರು ಫೋನ್ ಮಾಡಿದ್ದು ಅಂತ ನೋಡಿದ್ರೆರಶ್ಮಿ.
ಸ್ವಲ್ಪ ಭಯದಿಂದಲೇ ಫೋನ್ ರಿಸೀವ್ ಮಾಡಿ ಮಾತನಾಡತೊಡಗಿದ.

"ವೆಂಕಿ-ಹಲೋ
ರಶ್ಮಿ- ನಾನು ರಶ್ಮಿ ಮಾತಾಡ್ತಾ ಇದೀನಿ.
ವೆಂಕಿ- ಹೇಳಿ ರಶ್ಮಿ ಹೇಗಿದಿರಾ?
ರಶ್ಮಿ- ನಾನು ಚೆನ್ನಾಗಿದ್ದೀನಿ ನೀನು?
ವೆಂಕಿ- ಫೈನ್.ಏನು ಫೋನ್ ಮಾಡಿದ್ದು?
ರಶ್ಮಿ- ಏನಿಲ್ಲ ನಿನ್ನ ಮೆಸೇಜ್ ನೋಡ್ದೆ
ವೆಂಕಿ- ಓ ಅದ ಹೇಳಿ ಏನು ವಿಷ್ಯ?
ರಶ್ಮಿ- ನೋಡು ವೆಂಕಿ ನಾನು ನಿನಗೆ ಅವತ್ತೇ ಹೇಳಿದ್ದೆ ನನಗೆ ಪ್ರೀತಿ ಪ್ರೆಮದಲ್ಲೆಲ್ಲ ನಂಬಿಕೆ ಇಲ್ಲ ಅಂತ.
        ಮಧ್ಯದಲ್ಲೇ ಅವಳ ಮಾತನ್ನ ನಿಲ್ಲಿಸಿ,
ವೆಂಕಿ- ನನಗೆ ನಂಬಿಕೆ ಇದೆ ಕಣ್ರೀ..
ರಶ್ಮಿ- ನಿನಗೆ ಹೇಗೆ ಹೇಳ್ಬೇಕು ಅಂತ ನಂಗೆ ಗೊತ್ತಾಗ್ತಾ ಇಲ್ಲ ವೆಂಕಿ.. ನಂಗೆ ಯಾಕೆ ಈ
         ಪ್ರೀತಿ ಪ್ರೇಮದ ಬಗ್ಗೆ ನಂಬಿಕೆ ಇಲ್ಲ ಅನ್ನೋ ವಿಷ್ಯ ನಿಂಗೆ ಗೊತ್ತಿಲ್ಲ.ನಿನ್ನ ಫ್ರೆಂಡ್
         ಹೇಳ್ದ ಅಂತ ನಿಂಗೆ ಮೆಸೇಜ್ ಮಾಡಿದ್ದೆ ಅಷ್ಟೇ.ಪ್ಲೀಸ್ ಮತ್ತೆ ಅದೇ ವಿಷಯನ ತೆಗಿಬೇಡಾ.
ವೆಂಕಿ- ನೋಡಿ ಅದೆಲ್ಲ ನಂಗೆ ಗೊತ್ತಿಲ್ಲ.ನಾನು ಮೆಸೇಜ್ ಮಾಡಬೇಡಿ ಮಾಡಿದ್ರೆ ಬಿಡಲ್ಲ ಅಂದಿದ್ದೆ ..
          ಸ್ವಲ್ಪ ನಮ್ ಕಷ್ಟನ ಅರ್ಥ ಮಾಡಕೊಳ್ರೀ .ನೀವು ಏನೇ ಹೇಳ್ರಿ ನಾನು ನಿಮ್ಮನ್ನ
          ಪ್ರೀತಿಸ್ತ ಇದೀನಿ..ಒಂದು ದಿನ ನೀವು ಕೂಡ  ನನ್ನನ್ನ ಪ್ರೀತಿ ಮಾಡ್ತಿರಾ ಅನ್ನೋ ನಂಬಿಕೆ ನನಗಿದೆ.
     i love you ರಶ್ಮಿ.. i love you .
ರಶ್ಮಿ- ಓ.......... ಅದು ಎಂದಿಗೂ ಸಾದ್ಯ ಇಲ್ಲ..ಬೈ " ಅಂತ ಫೋನ್ ಕಟ್ ಮಾಡಿದ್ಲು ರಶ್ಮಿ.
ವೆಂಕಿ ನಗುತ್ತ ಮತ್ತೆ ಕೆಲಸದಲ್ಲಿ ತೊಡಗಿದ.

ಇತ್ತೀಚಿಗೆ ತುಂಬಾ ಖುಷಿಯಲ್ಲಿದ್ದ ವೆಂಕಿ ದಿನವೂ ರಶ್ಮಿಗೆ ಬೆಳಿಗ್ಗೆ ಗುಡ್ ಮಾರ್ನಿಂಗ್ ಇಂದ
ಹಿಡಿದು ರಾತ್ರಿ ಗುಡ್ ನೈಟ್ ಅಂತ ದಿನವೂ 8 ರಿಂದ 10 ಮೆಸೇಜ್ ಮಾಡ್ತಾ ಇದ್ದ.ಒಂದು ವಾರಗಳ
ಕಾಲ ಇವರ ಮೆಸೇಜ್ ಪುರಾಣ ಹೀಗೆ ನಡೆದಿತ್ತು.
           ಈ ನಡುವೆ ವೆಂಕಿ ಕಿರಣ್ ಮತ್ತು ಗುರು ಜೊತೆ ಮಾತಾಡ್ತಾ ನಡೆದ ಎಲ್ಲ ವಿಷಯವನ್ನ
ಹೇಳ್ತಾ ಇದ್ದ.ಆದರೆ ಯಾಕೋ ಕಿರಣ್ ಇತ್ತೀಚಿಗೆ ಪ್ರೀತಿ ವಿಷಯದಲ್ಲಿ ತುಂಬಾ ಸೀರಿಯಸ್ ಆಗಿ ಇರೋದನ್ನ
ಗಮನಿಸಿದ ವೆಂಕಿ ಗುರು ಅವನನ್ನ ಏನಂತ ವಿಚಾರಿಸಿದಾಗ"ಹೌದು ಕಣ್ರೋ ನನಗೋ ಯಾಕೋ ಲವ್ ಆಗಿದೆ
ಅಂತ ಅನಿಸ್ತಾ ಇದೆ.ಇಷ್ಟು ದಿನ ಹುಡುಗಿಯರು ಅಂದ್ರೆ ಬರೀ ಟೈಮ್ ಪಾಸ್ ಅನ್ಕೊಂಡಿದ್ದೆ,ಆದ್ರೆ ಒಂದು ಹುಡುಗಿ ನನ್ನ
ಹೃದಯವನ್ನ ಕದ್ದಿದಾಳೆ ಕಣ್ರೋ.ನಾನು ಅವಳನ್ನ ತುಂಬಾನೇ ಹಚ್ಹ್ಕೊಂಡಿದಿನಿ." ಅಂದಾಗ ವೆಂಕಿ "ಈ ಪ್ರಿತಿನೆ
ಹೀಗೆ ಎಲ್ಲಿಂದ ಶುರುವಾಗುತ್ತೆ ಅಂತಾನೆ ಗೊತ್ತಾಗಲ್ಲ,ಆಗಲಿ ಮಚಾ ಗ್ರೇಟ್ ಯಾರೋ ಅವಳು ನಿನ್ನಂತ
ಹುಡುಗನ್ನ ಸರಿ ಮಾಡಿರೋಳು?"ಅಂದಾಗ ಕಿರಣ್ "ಟೈಮ್ ಬಂದಾಗ ಹೇಳ್ತೀನಿ..
ನಾನು ಅವಳಿಗೆ ನಾನು ಅವಳನ್ನ ಲವ್ ಮಾಡ್ತಾ ಇರೋದನ್ನ ಹೇಳಿದೀನಿ,ಅವಳೂಒಪ್ಕೊಂಡಿದಾಳೆ.
ಮುಂದೇನು ಅಂತ ವಿಚಾರ ಮಾಡಬೇಕು ಆಮೇಲೆ ನಿಮಗೆಲ್ಲ ಸಿಹಿ ಸುದ್ದಿ ಹೇಳ್ತೀನಿ"ಅಂದಿದ್ದ.ಆಗ ಗುರು "ಆಯ್ತಪ್ಪ
ಬರೀ ಸಿಹಿ ಸುದ್ದಿ ಸಾಲದು ಮಗಾ ಸಿಹಿ ಊಟಾನು ಬೇಕು" ಅಂತ ತಮಾಷೆ ಮಾಡಿದ್ದ.
         ಮೊದಮೊದಲು ವೆಂಕಿಯ ಮೆಸೇಜ್ ಸರಿಯಾಗಿ ಓದದ ರಶ್ಮಿ ಇತ್ತೀಚಿಗೆ ಅವನ ಮೆಸೇಜ್ ಗೆ ದಾರಿ
ಕಾಯ್ತಾ ಇದ್ದಳು.ಅವಳಿಗೆ ಅರಿವಿಲ್ಲದಂತೆ ಪ್ರೀತಿಯ ಬಲೆಯಲ್ಲಿ ಅವಳು ಸಿಕ್ಕಿಹಾಕಿಕೊಂಡಿದ್ದು ಅವಳ ಅರಿವಿಗೇ
ಬಂದಿರಲಿಲ್ಲ.ಆದ್ರೆ ಎಂದೂ ಅದನ್ನ ವೆಂಕಿಯೇದುರಿಗೆ ತೋರಿಸಿರಲಿಲ್ಲ..ಒಂದು ದಿನ ವೆಂಕಿ ಯಾವುದೊ
ಕಾರಣದಿಂದ ಬೆಳಿಗ್ಗೆಯಿಂದ ಸಂಜೆವರೆಗೂ ಮೆಸೇಜ್ ಮಾಡಿರಲಿಲ್ಲ.ಏನೋ ಕಳೆದುಕೊಂಡಂತೆ ರಶ್ಮಿ ಸಂಜೆ
ತಾನಾಗೆ ವೆಂಕಿಗೆ ಮೆಸೇಜ್ ಮಾಡಿ"ಏನು ಇವತ್ತು ಬೆಳಿಗ್ಗೆಯಿಂದ ಒಂದು ಮೆಸೇಜ್ ಕೂಡ ಇಲ್ಲ,ದಿನಾ
ಬೆಳಿಗ್ಗೆಯಿಂದ ನನ್ನ ತಲೆ ಕೆಡಿಸ್ತಾ ಇದ್ದೆ.ಇವತ್ತು ಏನಾಯ್ತು?ಯಾಕೆ ಸೋತು ಹೋದ್ಯಾ?ಅವತ್ತು ಅದೇನೋ 
ಮತ್ತೆ ಮೆಸೇಜ್ ಮಾಡಿದ್ರೆ ಬಿಡೋದಿಲ್ಲ,ಒಂದು ದಿನ ನೀನಾಗೆ ನನ್ನ ಪ್ರೀತಿ ಮಾಡ್ತಿಯ ಅಂತೆಲ್ಲ ಅಂದಾಗಿತ್ತು?ಅಂತೆಲ್ಲ
ಮೆಸೇಜ್ ಮಾಡಿದ್ದನ್ನ ರಾತ್ರಿ ನೋಡಿದ ವೆಂಕಿ ತನಗೆ ತಾನೇ ಬಯ್ದುಕೊಳ್ಳುತ್ತಾ ಅವಳಿಗೆ ಮೆಸೇಜ್ ಮಾಡಿದ.

ವೆಂಕಿ-ಹಾಗೇನಿಲ್ಲ ಡಾರ್ಲಿಂಗ್ ಇವತ್ತು ಸ್ವಲ್ಪ ಕೆಲಸ ಇದ್ದರಿಂದ ಮೆಸೇಜ್ ಮಾಡೋಕೆ ಆಗಿರಲಿಲ್ಲ..
ರಶ್ಮಿ-ಓಹೋ ಹಾಗೋ,ಇಷ್ತೆಪ್ಪ ನಿಮ್ದೆಲ್ಲ ಸ್ವಲ್ಪ ದಿನ ಹಿಂದೆ ಬೀಳ್ತೀರಾ ಆಮೇಲೆ ಸುಮ್ನಾಗ್ತಿರಾ.ನಂಗೊತ್ತಿಲ್ವ ?
ವೆಂಕಿ-ಇರಬಹುದು ಆದ್ರೆ ನಾನು ಹಾಗಲ್ಲ ನೀವು ನನ್ನ ಪ್ರೀತಿ ಮಾಡೋವರೆಗೂ ಬಿಡಲ್ಲ ಕಣ್ರೀ..
ರಶ್ಮಿ-ಅದು ಈ ಜನ್ಮದಲ್ಲಿ ಸಾಧ್ಯ ಇಲ್ಲ ಕಣೋ..
ವೆಂಕಿ-ನಿಮಗೆ ಒಂದು ವಿಷಯ ಗೊತ್ತ ರಶ್ಮಿ.. ನನಗೆ ಈಗ ಅನಿಸ್ತಾ ಇದೆ ನೀವೂ ಕೂಡ ನನ್ನ ಇಷ್ಟ
       ಪಡೋಕೆ ಶುರು ಮಾಡಿದೀರಾ ಅಂತ.
ರಶ್ಮಿ-(ಗೊಂದಲದಿಂದ) ಯಾಕದು??
ವೆಂಕಿ-ಒಂದು ದಿನ ಮೆಸೇಜ್ ಮಾಡಿಲ್ಲ ಅಂದ್ರೆ ನೀವೇ ರಿಪ್ಲಾಯ್ ಮಾಡಿದೀರಾ?? ಅಂದ್ರೆ ಒಂದು ದಿನ
        ನನ್ನ ಮೆಸೇಜ್ ನೋಡಿಲ್ಲ ಅಂದ್ರ ನಿಮಗೆ ಏನೇನೋ ಆಗೋಕೆ ಶುರು ಆಗಿದೆ ಅಂತ.ನಮ್ಮ ಲವ್
         ಸ್ಟೋರಿ ಲಿ ಸ್ವಲ್ಪ ಸುಧಾರಣೆ ಆಗಿದೆ ಅಂತ ಆಯ್ತು.. ಇರಲಿ ಇನ್ನು ಸ್ವಲ್ಪ ದಿನ ಕಣ್ರೀ..
    i love you .. miss you dear .
ರಶ್ಮಿ-but  i hate you ,i hate you,i hate you...
ವೆಂಕಿ-ಅಂತು ನನ್ನ ಬಗ್ಗೆ ಎರಡು ಶಭ್ದ ಹೇಳಿದಿರಾ..ಮಧ್ಯದ್ದು ಸ್ವಲ್ಪ ಮಿಸ್ ಆಗ್ತಾ ಇದೆ ಪರವಾಗಿಲ್ಲ..ಹಹಹ "
ಅಂತ ಮೆಸೇಜ್ ಮಾಡಿ ತನಗೆ ತಾನೇ ನಕ್ಕ.
                        
           ಅಂದು ಗುರುವಾರ ವೆಂಕಿ ದಿನದಂತೆ ರಶ್ಮಿಗೆ ಮೆಸೇಜ್ ಮಾಡುತ್ತಾ ಕೆಲಸದಲ್ಲಿ ತೊಡಗಿದ್ದ.
ಮಧ್ಯಾಹ್ನ ಸುಮಾರು 3 ಗಂಟೆಯಾಗಿರಬಹುದು ಮೊಬೈಲ್ ಶಬ್ದವಾಯಿತು. ವೆಂಕಿ ಫೋನ್ ರಿಸೀವ್
ಮಾಡಿ ಹಲೋ ಎಂದ.... ಆ ಕಡೆಯಿಂದ ಮಾತನಾಡಿದ  ವ್ಯಕ್ತಿಯ ಮಾತು ಕೇಳಿ ವೆಂಕಿ ಒಮ್ಮೆಲೇ
what  ಅಂತ ಉದ್ಗರಿಸಿದ.ಫೋನಲ್ಲಿ ಕೇಳಿದ ಸುದ್ದಿ ಕೇಳಿ ಮತ್ತೆ ವೆಂಕಿಗೆ ಶಾಕ್ ಹೊಡೆದಂತಾಗಿತ್ತು.....6.
ಕೆಲ ನಿಮಿಷ ಸುಮ್ಮನಿದ್ದ ವೆಂಕಿ ಫೋನಲ್ಲಿ ನಾನು ಬೆಂಗಳೂರಿಗೆ ತಕ್ಷಣ ಬರುವುದಾಗಿ ತಿಳಿಸಿ ಫೋನಿಟ್ಟು
ಬಾಸ್ ಹತ್ರ ಹೋಗಿ ತನಗೆ ತಕ್ಷಣ ಬೆಂಗಳೂರಿಗೆ ಹೋಗಬೇಕಾಗಿರುವುದರಿಂದ ಮೂರು ದಿನದ ರಜೆ
ತೆಗೆದುಕೊಂಡು ಮನೆ ಕಡೆ ಹೆಜ್ಜೆ ಹಾಕಿದ.ಮನೆಗೆ ಬಂದವನೇ ಮೂಲೆಯಲ್ಲಿದ್ದ ಒಂದು ಬ್ಯಾಗನ್ನು ಎತ್ತಿಕೊಂಡು
ಒಂದೆರಡು ಬಟ್ಟೆ ತುರುಕಿಕೊಂಡು ಪರ್ಸ್ ಲ್ಲಿ ದುಡ್ಡು ಇರುವುದನ್ನ ಖಾತ್ರಿ ಪಡಿಸಿಕೊಂಡು ಬಸ್ ಸ್ಟ್ಯಾಂಡ್ ಕಡೆ ಹೊರಟ.
ಸ್ಟ್ಯಾಂಡ್ ಲ್ಲಿ ಬೆಂಗಳೂರು ಬಸ್ ಹಿಡಿದು ಬಸ್ಸಲ್ಲಿ ಕೂತು ಯೋಚಿಸತೊಡಗಿದ"ಕಿರಣ್ ಆತ್ಮಹತ್ಯೆ
ಮಾಡಿಕೊಳ್ಳೋಕೆ ಸಾಧ್ಯನಾ,ಅದೂ ಪ್ರೀತಿ ವಿಷಯದಲ್ಲಿ? ನನಗ್ಯಾಕೋ ನಂಬಿಕೆ ಬರುತ್ತಿಲ್ಲ.ಏನಾಗಿರಬಹುದು "
ಅಂತೆಲ್ಲ ಯೋಚನೆ ಮಾಡುತ್ತಾ ಬಸ್ಸಲ್ಲಿ ರಾತ್ರಿ ನಿದ್ದೆಯೂ ಬರದೆ ಅದೇ ಯೋಚನೆ ಮಾಡುತ್ತಾ ಬೆಳಗಿನ ಜಾವ
ಬೆಂಗಳೂರಿಗೆ ಬಂದು ತಲುಪಿದ.ಅಲ್ಲಿಗೆ ಬಂದಿದ್ದ ಗುರುನ ನೋಡಿದ ಕೂಡಲೇ ಏನಾಯ್ತೋ ಇದು? ಇದೆಲ್ಲ ಹೇಗಾಯ್ತು?
ನಿನ್ನೆ ನೀನು ಫೋನಲ್ಲಿ ಏನೂ ಹೇಳಲಿಲ್ಲ?ಯಾರವಳು?ಅವನು ಆತ್ಮಹತ್ಯೆ ಮಾಡಿಕೊಳ್ಳೋವಂತದ್ದು ಏನಾಗಿತ್ತು?
ಅಂತೆಲ್ಲ ಪ್ರಶ್ನೆ ಪ್ರಶ್ನೆ ಮಾಡತೊಡಗಿದ.ಎಲ್ಲ ಹೇಳ್ತೀನಿ ಬಾ ಅಂತ ಗುರು ಅವನನ್ನ ಬೈಕ್ ಮೇಲೆ ಕೂರಿಸಿಕೊಂಡು ಹೊರಟ.  
             ಬೆಳಿಗ್ಗೆಯೊಳಗೆ ಎಲ್ಲ ಅಂತ್ಯಕ್ರಿಯೆ ಮುಗಿದಿದ್ದರಿಂದ ಇಬ್ಬರೂ ಕಿರಣ್ ನ ಮನೆಯವರನ್ನ ಭೇಟಿ ಮಾಡಿದರು.
ವೆಂಕಿ ಏನೂ ತೋಚದಂತೆ ಸುಮ್ಮನೆ ಮುಗುಳ್ನಗುತ್ತ ಹಾರ ಹಾಕಿಸಿಕೊಂಡ ಕಿರಣ್ ಫೋಟೋದೆದುರು ಕುಳಿತ.ಏನು
ಮಾತನಾಡಬೇಕೆಂದು ಕೂಡ ಅರಿಯದೇ ಸುಮ್ಮನೆ ಕುಳಿತಿದ್ದ.ಬಾಲ್ಯದಲ್ಲಿ ಕಳೆದ ದಿನಗಳೆಲ್ಲವೂ ಅವನ ಕಣ್ಣೆದುರಿಗೆ
ಹಾಯ್ದು ಹೋಗುತ್ತಿದ್ದವು.ಇದ್ದಕ್ಕಿದ್ದಂತೆ ಯಾರೋ ಅವನ ಭುಜದ ಮೇಲೆ ಕೈ ಇಟ್ಟಂತಾಯಿತು.ತಟ್ಟನೆ ಎದ್ದು
ಹಿಂತಿರುಗಿದಾಗ ಕಿರಣ್ ತಂದೆ ಎದುರಿಗೆ ನಿಂತಿದ್ದನ್ನ ನೋಡಿ ಇದೆಲ್ಲ ಹೇಗಾಯ್ತು ಎಂದ.ಎಲ್ಲ ನಮ್ಮ ಹಣೆ ಬರಹನಪ್ಪಾ
ಏನು ಮಾಡೋಕೆ ಬರುತ್ತೆ ಎಲ್ಲ ವಿಧಿಯಾಟ ಅಂತ ವೆಂಕಿ ಕೈಗೆ ಒಂದು ಚೀಟಿಯನ್ನ ಇಡುತ್ತಾ ಇದು ನಿಮಗೆ ಅಂತ
ಅವನು ಬರೆದ ಪತ್ರನಪ್ಪ ಇದರ ಮೇಲೆ ನಿಮ್ಮಿಬರ ಹೆಸರಿದೆ ಅಂತ ಗುರುನ ಕಡೆಗೆ ನೋಡಿದರು.ಗುರುಗೂ ಕೂಡ
ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತು ಅಲ್ಲಿದ್ದು ನಂತರ ಗುರುನೇ ವೆಂಕಿಗೆ ಹೋಗೋಣ್ವಾ ಅಂದಾಗ
ಮನಸಿಲ್ಲದೇ ಅಲ್ಲಿಂದ ಹೊರಟ ವೆಂಕಿ.ಮನೆಗೆ ಬಂದವನೇ ಮೊದಲು ಮಾಡಿದ ಕೆಲಸವೇ ಕಿರಣ್ ತಂದೆ ಕೊಟ್ಟಿದ್ದ ಚಿಟಿ ಓದಿದ್ದು.

"ಪ್ರೀತಿ ಎಂಬುದು ಬರೀ ಮಾಯೆ ಕಣ್ರೋ.. ಅದೆಲ್ಲ ಸುಳ್ಳು.ಪ್ರೀತಿ ಪ್ರೇಮ ಅಂತ ಎಲ್ಲ ಹಿಂದೆ ಬೀಳ್ತಾರೆ,
ಅದನ್ನೇ ನಾನೂ ಮಾಡಿದ್ದು.ಪ್ರೀತಿ ಅಂದ್ರೆ ಏನೂ ಅಂತಾನೆ ತಿಳಿದೇ ಇದ್ದ ನಾನು ಪ್ರೀತಿ ಪ್ರೇಮ ಅಂತ
ನನ್ನ ಜೀವನಾನೇ ಹಾಳ್ ಮಾಡ್ಕೊಂಡೆ.ಆದರೆ ನಿಜವಾದ ಪ್ರೀತಿ ಅಂದ್ರೆ ಏನೂ ಅಂತಾನೆ ನನಗೆ ತಿಳಿಲಿಲ್ಲ.
ನಾನು ತುಂಬಾ ಪ್ರೀತಿಸಿದ ಹುಡುಗಿ ಅವಳೂ ನನ್ನ ಪ್ರೀತಿಸ್ತೀನಿ ಅಂತ ಹೇಳಿದವಳು ಕಣೋ ಆದರೆ
ನಾನು ಬೆಂಗಳೂರಿಗೆ ಬಂದು ನೋಡಿದಾಗ ಅವಳು ಇನ್ಯಾರದೋ ಜೊತಗೆ ಓಡಾಡ್ತಾ ಇದ್ಲು.
ಏನಿದೆಲ್ಲ ಅಂತ ಕೇಳಿದಾಗ ನಾನು ಏನೋ ತಮಾಷೆ ಅಂತ ನಿಂಗೆ ಪ್ರೀತಿ ಮಾಡ್ದೆ ಅಂತ ಹೇಳ್ದೆ ಅಷ್ಟೇ ಅದನ್ನ
ನೀನು ಸೀರಿಯಸ್ ಆಗಿ ತಗೊಂಡ್ರೆ ನಾನೇನು ಮಾಡ್ಲಿ ಅಂದು ಅವನ ಜೊತೆ ತಿರುಗಿ ಕೂಡ ನೋಡ್ದೆ
ಹೋಗಬಿಟ್ಲು ಕಣ್ರೋ..ಅವಳು ನಾನು ನಿನ್ನ ಲವ್ ಮಾಡ್ತಿಲ್ಲ ಅಂದ್ರೆ ಅಷ್ಟೇನೂ ಬೇಜಾರ್ ಆಗ್ತಾ ಇರ್ಲಿಲ್ಲ
ಆದ್ರೆ ಅವ್ಳು ನನ್ನೆದುರಿಗೇ ನಿನ್ನ ಲವ್ ಮಾಡ್ತಿಲ್ಲ ಅಂತ ಇನ್ನೊಬ್ಬನ ಜೊತೆ ಹೋಗಿದ್ದು ನನಗೆ ನೋಡೋಕೆ
ಆಗಿಲ್ಲ.ಅವಳಿಲ್ಲದೆ ನಂಗೆ ಜೀವನ ಇಲ್ಲ.ಯಾವಾಗಲೂ ನಾನು ಆಡ್ತಿದ್ದ  ಆಟನ ಒಂದು ಹುಡುಗಿ ನನ್ನ ಲೈಫ್ ಲ್ಲಿ
ಆಡಿಬಿಟ್ಟಲು.ನನಗೆ ನನ್ ಮೇಲೆ ಅಸಹ್ಯ ಆಗ್ತಾ ಇದೆ.ಇಷ್ಟೆಲ್ಲಾ ಆದ್ಮೇಲೆ ನಿಮಗೆ ಮುಖ ತೋರಿಸೋ ಧೈರ್ಯ
ಕೂಡ ನಂಗೆ ಇಲ್ಲ. ನಾವು ನಂಬಿಕೊಂಡಿರೋ ಪ್ರೀತಿ ಬರೀ ತೋರಿಕೆ ಅಷ್ಟೇ.ಈ ಪ್ರೀತಿ ಪ್ರೇಮ ಅಂದ್ರೆ ಬರೀ
ನಾಟಕ ಅಷ್ಟೇ.ನೀವೂ ಕೂಡ ಈ ನಾಟಕದಲ್ಲಿ ಬಲಿಪಶು ಆಗಬಾರದು ಅನ್ನೋದೇ ನನ್ನ ಆಸೆ.
ನಾನು ನಿಮ್ಮನ್ನೆಲ್ಲ ಬಿಟ್ಟು ಹೋಗ್ತಾ ಇದೀನಿ. ನನ್ನನ್ನ ಕ್ಷಮಿಸಿಬಿಡಿ.-ಕಿರಣ್."
       ಇದನ್ನ ಓದಿ ಇಬ್ಬರೂ ಒಂದು ಕ್ಷಣ ದಂಗಾಗಿದ್ದರೂ.. ವೆಂಕಿ ಮಾತ್ರ ಏನೂ ಹೇಳಲಾಗದೆ ನೀನು ತಪ್ಪು ಮಾಡ್ಬಿಟ್ಟೆ,
ದುಡುಕಿಬಿಟ್ಟೆ ಕಿರಣ್ ದುಡುಕಿಬಿಟ್ಟೆ ಅಂತ ಅಳತೊಡಗಿದ.ಗುರು ಏನೂ ಮಾತನಾಡದೆ ಹೊರ ನಡೆದ.
ಒಂದು ಕಡೆ ಈಗ ತಾನೇ ಶುರುವಾಗುತ್ತಿದ್ದ ತನ್ನ ಪ್ರೇಮ ಕಥೆ,ಇನ್ನೊಂದು ಕಡೆ ಪ್ರಿತಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ
ಸ್ನೇಹಿತನ ದುರಂತ ಕಥೆ ಇವೆರಡರೊಳಗೆ ತೊಳಲಾಡುತ್ತಿದ್ದ ವೆಂಕಿ.ಇದರ ಬಗ್ಗೆ ಯೋಚನೆ ಮಾಡುತ್ತಲೇ ಹಾಸಿಗೆಯಲ್ಲಿ ಹೊರಳಿದ.
               ಹಿಂದಿನ ದಿನ ಮಧ್ಯಾಹ್ನದಿಂದ ಈವರೆಗೂ ವೆಂಕಿಯ ಮೆಸೇಜ್ ಬರದೇ ಇದ್ದಿದ್ದರಿಂದ ಕಂಗೆಟ್ಟ ರಶ್ಮಿ ಸೀದಾ
ವೆಂಕಿಗೆ ಫೋನ್ ಮಾಡಿದ್ಲು.ಇಬ್ಬರ ಕಥೆಯ ಬಗ್ಗೆ ವಿಚಾರ ಮಾಡುತ್ತಿದ್ದ ವೆಂಕಿಗೆ ಆಗ ತಾನೇ ಕಣ್ಣು ಹತ್ತಿತ್ತು.
ಅಷ್ಟರೊಳಗೆ ರಶ್ಮಿಯ ಫೋನ್.ಸ್ವಲ್ಪ ನಿದ್ದೆಯೊಳಗೆ ಇದ್ದ ವೆಂಕಿ ಎದ್ದು ಮಾತನಾಡತೊಡಗಿದ.

ವೆಂಕಿ-ಹಲೋ... ಯಾರು??
ರಶ್ಮಿ-ಯಾಕೋ ನಮ್ಮ ನೆನಪು ಮರೆತು ಹೋದ ಹಾಗಿದೆ?
ವೆಂಕಿ-ಯಾರು ಯಾರು ನೀವು?
ರಶ್ಮಿ-ನಾನು ಕಣೋ ರಶ್ಮಿ.. ಏನಾಯ್ತೋ ನಿಂಗೆ..
ವೆಂಕಿ-ಯಾವ ರಶ್ಮಿ... ನನಗೇನಾಗಿದೆ??
ರಶ್ಮಿ-ಪ್ರೀತಿ ಪ್ರೇಮ ಅಂತ ಹಿಂದೆ ಬಿದ್ದಿದ್ದೆ  ಅದೇ ರಶ್ಮಿ..
ವೆಂಕಿ-ಯಾವ ಪ್ರೀತಿ ಯಾವ ಪ್ರೇಮ ಅದೆಲ್ಲ ಬರೀ ಸುಳ್ಳು. ನಾನು ಯಾರೋ ನೀವು ಯಾರೋ ಒಬ್ಬರಿಗೊಬ್ಬರು
        ಪರಿಚಯ ಇಲ್ಲ ಏನಿಲ್ಲ..ಇನ್ನೆಲ್ಲಿಯ ಪ್ರೀತಿ.ನಂಗೂ ನಿಮಗೂ ಏನು ಸಂಬಂಧ ??
        ನೋಡಿ ಈ ಪ್ರೀತಿ ಪ್ರೇಮ ಎಲ್ಲ ಬರೀ ನಾಟಕ ಅಷ್ಟೇ,ನನಗೂ ನಿಮಗೂ ಏನೂ ಸಂಬಧ ಇಲ್ಲ.ಸುಮ್ನೆ ನನಗೆ
        ಫೋನ್ ಮಾಡಿ ತಲೆ ತಿನ್ಬೇಡಿ" ಅವಳ ಉತ್ತರಕ್ಕೋ ಕಾಯದೆ ಫೋನ್ ಕಟ್ ಮಾಡಿ.ಫೋನ್ ಸ್ವಿಚ್ ಆಫ್ ಮಾಡಿ ಮಲಗಿದ.
                  
                    ಸುಮಾರು ಒಂದು ಗಂಟೆಗಳ ಕಾಲ್ ಪದೇ ಪದೇ ಕಾಲ್ ಮಾಡಿದ ರಶ್ಮಿ ಮೊಬೈಲ್ ಸ್ವಿಚ್ ಆಫ್
ಆಗಿರೋದರಿಂದ ಬೇಸತ್ತು,ಏನಾಗಿರಬಹುದೆಂದು ವಿಚಾರ ಮಾಡತೊಡಗಿದಳು.ಇತ್ತ ಕಿರಣ್ ನ ಅಗಲಿಕೆಯಿಂದ
ಬೇಜಾರಾಗಿದ್ದ ವೆಂಕಿ ಆವೇಶದಲ್ಲಿ ರಶ್ಮಿಗೆ ಏನೇನೋ ಬೈಯ್ದು ಚಿಂತಿಸತೊದಗಿದ್ದ.ತಾನಾಡಿದ ಮಾತು ಸರಿನಾ
ಅಂತ ವಿಚಾರ ಮಾಡುತ್ತಾ ಹಾಸಿಗೆಯಲ್ಲಿ ಆಡ್ದಾದವನಿಗೆ ಯಾವಾಗ ನಿದ್ರಾದೇವಿ ಪ್ರಸನ್ನಳಾದಲೋ ತಿಳಿಯಲಿಲ್ಲ.
ಎದ್ದಾಗ ಸಂಜೆ ಐದಾಗಿತ್ತು. ಎದ್ದು ಮುಖ ತೊಳೆದುಕೊಂಡು ಮತ್ತೆ ಹಾಸಿಗೆ ಮೇಲೆ ಬಂದು ಕೂತು ಯೋಚಿಸತೊಡಗಿದ
"ನಿಜವಾಗಲೂ ಪ್ರೀತಿ ಪ್ರೇಮ ಇದ್ಯಾ? ಹಾಗೆಂದರೇನು? ಬರೀ ಆಕರ್ಷಣೆನಾ? ಇಲ್ಲ ನಾನು ನಿಜವಾಗಲೂ
ಪ್ರೀತಿ ಮಾಡ್ತಾ ಇದೀನಿ. ಇಲ್ಲ ಅದು ಪ್ರೀತಿ ಅಲ್ಲ ನನಗೆ ಅವಳ ಮೇಲೆ ಇದ್ದ ಆಕರ್ಷಣೆ ಮಾತ್ರ.ಈ ಪ್ರೀತಿ ಪ್ರೇಮ
ಎಲ್ಲ ಸುಳ್ಳು.ಈ ಪ್ರೀತಿ ಪ್ರೇಮದ ಗುಂಗಿನಲ್ಲಿ ನನ್ನ ಪ್ರಾಣ ಸ್ನೇಹಿತನನ್ನ ನಾನು ಕಳಕೊಂಡಿದಿನಿ."ಈಗ ವೆಂಕಿ ಪೂರ್ಣವಾಗಿ
ಪ್ರೀತಿ ಪ್ರೇಮ ಗುಂಗಿನಿಂದ ಹೊರಬಂದಿದ್ದ.ಅವನಿಗೆ "ನೀವು ಕೂಡ ಪ್ರೀತಿ ಪ್ರೇಮ ಎಂಬ ನಾಟಕದ
ಬಲಿಪಶು ಆಗಬೇಡಿ" ಅನ್ನೋ ಕಿರಣ್ ನ ಮಾತು ಮತ್ತೆ ಮತ್ತೆ ಕೇಳತೊಡಗಿತು.ಈಗ ವೆಂಕಿಗೆ ತಾನು ರಶ್ಮಿಗೆ
ಆಡಿದ ಮಾತುಸರಿ ಎಂದೆನಿಸಿತು.ಅಷ್ಟರಲ್ಲೇ ಗುರು ಹೊರಗಡೆಯಿಂದ ಬಂದ.ಗುಂಗಿನಲ್ಲಿದ್ದ ವೆಂಕಿನ ಅಲುಗಾಡಿಸಿ
ಹೋಟೆಲ್ ನಿಂದ ತಂದ ಊಟನ ಎದುರಿಗಿಟ್ಟ.ಮನಸಿಲ್ಲದಿದ್ದರೂ ಗುರುನ ಒತ್ತಾಯಕ್ಕೆ ಸ್ವಲ್ಪ ಊಟ ಮಾಡಿ ಸಾಕೆಂದಿದ್ದ.
ಸಂಜೆ ಸ್ವಲ್ಪ ಹೊತ್ತು ಊರಲ್ಲ ತಿರುಗಾಡಿದರೂ ಕಿರಣ್ ಅವನ ಕಣ್ಣೆದುರಿಗೆ ಬಂದ ಹಾಗಾಗ್ತಿತ್ತು.ರಾತ್ರಿ ಸ್ವಲ್ಪ ನೀರು
ಕುಡಿದು ಮಲಗಿದ ವೆಂಕಿ ರಾತ್ರಿಯೆಲ್ಲ ತಾನು ಬಾಲ್ಯದಲ್ಲಿ ಗುರು ಮತ್ತು ಕಿರಣ್ ಜೊತೆ ಕಳೆದ ದಿನಗಳನ್ನ ಮೆಲುಕು
ಹಾಕುತ್ತ ನಿದ್ದೆ ಬರುವುದರೊಳಗೆ ರಾತ್ರಿ ಹನ್ನೆರಡಾಗಿತ್ತು.
                          ಅತ್ತ ವೆಂಕಿಯ ನೆನಪಲ್ಲಿ ರಶ್ಮಿಯ ನಿದ್ರೆ ಮಾಯವಾಗಿತ್ತು.ಏನಾಗಿರಬಹುದು ಅಂತ
ಯೋಚಿಸುತ್ತಲೇ ರಾತ್ರಿ ಕಳೆದ ರಶ್ಮಿ ಬೆಳಿಗ್ಗೆಯಾದರೂ ವೆಂಕಿಯ ಮೊಬೈಲ್ ಸ್ವಿಚ್ ಆಫ್ ಆಗಿರೋದನ್ನ ಕಂಡು
ಗಾಭರಿಯದಳು.ತಕ್ಷಣವೇ ಗುರುಗೆ ಫೋನ್ ಮಾಡಿ"ವೆಂಕಿ ಎಲ್ಲಿ ನಿನ್ನೆಯಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ
ನಿಮಗೇನಾದರೂ ಗೊತ್ತ" ಎಂದು ಕೇಳಿದಾಗ ಗುರು ನಡೆದ ವಿಷಯವನ್ನೆಲ್ಲ ಅವಳಿಗೆ ತಿಳಿಸಿದ.ಈಗ ಅವನು ನನ್ನ
ರೂಮಲ್ಲೇ ಮಲಗಿರುವುದಾಗಿ ಹೇಳಿದ.ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಸರಿ ಆಯ್ತು ಅಂತ ಗುರು ಫೋನಿಟ್ಟ.
ಬೆಳಿಗ್ಗೆ ಎಂಟಾಗಿತ್ತು ವೆಂಕಿನ ಎಬ್ಬಿಸಿದ ಗುರು ಎದ್ದು ರೆಡಿ ಆಗು ನಾನು ತಿಂಡಿ ತರ್ತೀನಿ ಅಂತ ಹೊರನಡೆದ.
ವೆಂಕಿ ಎದ್ದು ರೆಡಿ ಆಗುವುದರೊಳಗೆ ಗುರು ಬಿಸಿ ಬಿಸಿ ಇಡ್ಲಿ ಚಟ್ನಿ ತಂದು ಎದುರಿಗಿಟ್ಟ.ಇಬ್ಬರೂ ಮೌನದಲ್ಲೇ ತಿಂಡಿ
ತಿಂದಿದ್ದೂ ಆಯ್ತು.ನಂತರ ಗುರುನೆ ಮುಂದಾಗಿ"ಆದದ್ದು ಆಗಿ ಹೋಯ್ತು,ಎಲ್ಲ ದೇವರ ಲೀಲೆ ಮುಂದೆ ನಮ್ಮ
ಕೆಲಸ ನೋಡೋಣ ಆಲ್ವಾ? " ಅಂದಿದ್ದು ಕೇಳಿ ವೆಂಕಿ" ಹೌದು ಹೀಗಾಗಬಾರದಾಗಿತ್ತು ಎಲ್ಲ ಆಗಿ ಹೋಯ್ತು"
ಅಂತ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು "ನಾನು ಇವತ್ತು ಸಂಜೆ ಮತ್ತೆ ವಾಪಸ್ ಹೋಗ್ತಾ ಇದೀನಿ" ಅಂದ.
ಸರಿ ಎಂದ ಗುರು ಸ್ನಾನಕ್ಕೆ ನೀರು ಬಿಸಿ ಮಾಡಲು ಹೋದ.ಇಬ್ಬರೂ ತಯಾರಾಗಿ ಮಧ್ಯಾಹ್ನ ಹೋಟೆಲ್ ಗೆ ಹೋಗಿ
ಊಟ ಮಾಡಿ ಮತ್ತೆ ರೂಮ್ ಗೆ ಬಂದಾಯ್ತು.ಗುರು" ನಿನ್ನ ಹತ್ರ ಒಂದು ಮುಖ್ಯ ವಿಷಯ ಮಾತಾಡ್ಬೇಕು ವೆಂಕಿ"ಅಂದ.
ಏನು ಅದು ಅಂತ ಪ್ರಶ್ನಿಸಿದ ವೆಂಕಿ.ಸಂಜೆ ಪಾರ್ಕಿಗೆ ಹೋಗೋಣ ಅಲ್ಲಿ ಮಾತಾಡೋಣ ಅಂತ ಹೇಳಿ ಸುಮ್ನಾದ.
ಸುಮಾರು 4 ಗಂಟೆ ಹೊತ್ತಿಗೆ ಇಬ್ಬರೂ ರೆಡಿ ಆಗಿ ಹೊರಟರು.ವೆಂಕಿ ಅಲ್ಲಿಂದಲೇ ಹೈದರಾಬಾದ್ ಗೆ ಹೋಗುವ
ತಯಾರಿಯಲ್ಲೇ ಬ್ಯಾಗ್ ತಗೊಂಡು ಹೊರಟ.
              ಹೊರಗಡೆ ತುಂತುರು ಮಳೆ ಶುರುವಾಗಿತ್ತು. ಇಬ್ಬರೂ ಬೈಕ್ ಮೇಲೆ ಕುಳಿತು ಹತ್ತಿರದಲ್ಲೇ ಇದ್ದ
ಪಾರ್ಕ್ ಗೆ ಬಂದು ಒಂದು ಮರದಡಿ ಕುಳಿತರು.ಏನೋ ಮಾತಾಡ್ಬೇಕು ಅಂದೆ ಅಂತ ವೆಂಕೀನೆ ಮಾತು ಶುರು ಮಾಡಿದ.
ಹೌದು ವೆಂಕಿ ರಶ್ಮಿ ವಿಷ್ಯ ಅಂದ ಗುರು.ಅದಕ್ಕೆ ನಗುತ್ತ "ಯಾವ ರಶ್ಮಿ ಅದೆಲ್ಲ ಮುಗಿದ ಕಥೆ,ನಂಗೆ ಈಗ ಅದರಲ್ಲೆಲ್ಲ
ನಂಬಿಕೆ ಹೊರಟು ಹೋಗಿದೆ" ಅಂದ.ಅಷ್ಟರಲ್ಲೇ ಯಾರೋ ಎದುರಿಗೆ ಬಂದು ನಿಂತ ಹಾಗಾಯ್ತು..
ಯಾರೋ ನನಗೆ ಗುರುತಿರುವವರು ಅಂತ ನೋಡಿದ ವೆಂಕಿ ..ಅವಳೇ ರಶ್ಮಿ. ಫೋಟೋ ನೋಡೇ ಹೌಹಾರಿದ್ದ
ವೆಂಕಿಗೆ ಅವಳೇ ಎದುರಿಗೆ ಬಂದು ನಿಂತರೂ ಏನೂ ಅನಿಸಲಿಲ್ಲ.ಈಗ ವೆಂಕಿಯ ಮನದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಸ್ವಲ್ಪವೂ
ರುಚಿಯಿರಲಿಲ್ಲ.ಭುಜ ತಟ್ಟಿದ ಗುರು "ನಿನ್ನ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ರಶ್ಮಿ ನಂಗೆ ಫೋನ್ ಮಾಡಿದ್ಲು.
ನಾನು ನಡೆದ ವಿಷವನ್ನೆಲ್ಲ ಹೇಳಿದಾಗ ರಶ್ಮಿ ನಿನ್ನನ್ನ ಭೇಟಿಯಾಗಿ ಮಾತಾಡಬೇಕು ಅಂತ ಹೇಳಿದಳು,
ನಿನ್ನನ್ನ ಕೇಳಿದ್ರೆ ನೀನು ಎಲ್ಲಿ ಇಲ್ಲ ಅಂತಿಯೋ ಅಂತ ಹೇಳದೆ ಇಲ್ಲಿಗೆ ಕರ್ಕೊಂಡು ಬಂದೆ ಮಾತಾಡು "ಅಂತ ಹೇಳಿ
ಇವರಿಬ್ಬರಿಂದ ದೂರ ನಡೆದ ವೆಂಕಿ.ಇವರಿಬ್ಬರನ್ನ ಒಂದೇ ಕಡೇ ನೋಡಿದ ಕಿರಣ್ ಮೇಲಿಂದ ಅಳುತ್ತಿದ್ದಂತೆ,
ಅವನ ಕಣ್ಣೀರೇ ಮಳೆಯಾಗಿ ಧಾರಾಕಾರವಾಗಿ ಸುರಿಯುತ್ತಿದ್ದಂತೆ ಭಾಸವಾಗುತ್ತಿತ್ತು.
ಇಬ್ಬರೂ ಕೆಲ ಕ್ಷಣ ಸುಮ್ಮನಿದ್ದು ಏನು ಅಂತ ವೆಂಕಿಯೇ ಮಾತಿಗೆ ಪ್ರಾರಭಿಸಿದ.

ಒಮ್ಮೆಲೇ ಓಡಿ ಬಂದ ರಶ್ಮಿ 
i love you ವೆಂಕಿ  i love you.i love you so much.
ಅಂತ ವೆಂಕಿಯನ್ನ ತಬ್ಬಿ ಮುದ್ದಾದತೊದಗಿದಳು.ಒಂದು ಕಡೆ ದೂರವಾಗಿದ್ದ ಗೆಳೆಯ,ಇನ್ನೊದು ಕಡೆ ಬೇಡವೆಂದು
ತಿರಸ್ಕರಿಸಲು ಆರಂಭಿಸಿದ್ದ ಪ್ರೀತಿ. ಇವೆರಡರ ಮಧ್ಯದಲ್ಲಿ ಸಿಲುಕಿ ಏನುಮಾಡಬೇಕೆಂದು ತೋಚದೆ ಗರಬಡಿದವನಂತೆ
ಸುಮ್ಮನೆ ನಿಂತಿದ್ದ ವೆಂಕಿ.
ಮಳೆಯ ಹನಿಯ ಜೊತೆ ಕೆಳಗೆ ಬೀಳುತ್ತಿದ್ದ ಕಣ್ಣೀರಿನ ಸ್ಪರ್ಶ ಕೇವಲ ಭೂಮಿಗೆ ಮಾತ್ರ ಆಗುತ್ತಿತ್ತು.


ಪ್ರೀತಿ ಎಂಬುದು ಮಿಂಚಿದ್ದಂತೆ,
ನಾವಾಗೇ ಹೋಗಿ  ತಬ್ಬಿದರೂ
ಅದಾಗೇ ಬಂದು ತಬ್ಬಿದರೂ
ಸಾವು ನಮಗೇ ಕಟ್ಟಿಟ್ಟ ಬುತ್ತಿ.        

No comments:

Post a Comment