ನನ್ನ ಮನದಾಳದ ಮಾತುಗಳು...

ನಾ ಬರೆದ ಲೇಖನ.

1.
ನಂಗೂ ಒಂದು ದಿನ ಒಂದು ಲೇಖನ ಬರೆಯೋ ಆಸೆ ಆಯ್ತು. ಆದರೆ ಎಲ್ಲಿಂದ ಶುರು ಮಾಡಬೇಕು ಅನ್ನೋದೇ ತಿಳಿಲಿಲ್ಲ.
ಜಗತ್ತಿನಲ್ಲಿ ಸಾವಿರಾರು ವಿಷಯಗಳಿವೆ, ಅದರಲ್ಲಿ ಯಾವುದೂ ಒಂದು ವಿಷಯ ಆರಿಸಿ ಬರೆದರಾಯ್ತು. ಆದರೆ ಯಾವ ವಿಷಯ?
ಹೀಗೆ ಒಬ್ಬರಿಗೆ ಕೇಳ್ದೆ ಲೇಖನ ಬರೆಯೋಕೆ ಯಾವುದು ಸರಿಯಾದ ವಿಷಯ ಅಂತ. ಅವರಂದ್ರು ಯಾವುದಾದರು ಜನರಿಗೆ
ಇಷ್ಟವಾಗುವ ವಿಷಯ ತಗೊಳ್ಳಿ, ಅದರ ಬಗ್ಗೆ ಬರೆಯಿರಿ ಜನರಿಗೆ ಇಷ್ಟವಾಗುತ್ತೆ ಇಲ್ಲಾಂದ್ರೆ ಆ ಲೇಖನವನ್ನ ಯಾರೂ ಮೂಸಿ ಕೂಡ ನೋಡಲ್ಲ ಅಂತ.
ಅದ್ಕೆ ನಾನಂದೆ ಅಲ್ಲ ಲೇಖನವನ್ನ ನಾವು ನಮಗಾಗಿ ಬರೆಯೋದಾ ಅಥವಾ ಜನರಿಗಾಗಾ?? ಅದಕ್ಕೆ ಅವರಂದ ಮಾತು ಕೇಳಿ
ನನಗೂ ನಿಜ ಅನಿಸ್ತು ಅದು ಏನು ಗೊತ್ತಾ " ನಿಮಗೆ ನಿಮ್ಮ ಮನಸಿನ ಸಂತೋಷಕ್ಕಾಗಿ ಬೇಕಾದ್ರೆ ನಿಮ್ಮ ವಿಷಯದ ಬಗ್ಗೆ ಬರೀರಿ,ಇಲ್ಲಾಂದ್ರೆ ನಿಮ್ಮ
ಲೇಖನಕ್ಕೆ ಯಾವ ಬೆಲೆಯೂ ಇರೋಲ್ಲ " ಸರಿ ಬಿಡಿ ನಮ್ಮ ವಿಚಾರವನ್ನ ಬದಿಗಿಟ್ಟು ಜನರಿಗೆ ಬೇಕಾದದ್ದನ್ನೇ ಬರೆಯೋ ನಿರ್ಧಾರಕ್ಕೆ ಬಂದೆ.

ಅದು ಸರಿ ಜನರಿಗೆ ಬೇಕಾದ ವಿಷಯ ಅಂದ್ರೆ ಯಾವುದು? ಮತ್ತೆ ಅದೇ ಪ್ರಶ್ನೆ. ಯಾಕೆಂದ್ರೆ ಪ್ರತಿಯೊಂದೂ ಜನರ ರುಚಿ ಬೇರೆ ಬೇರೆ ಆಲ್ವಾ?
ನಾನು ಬರೆದಿದ್ದು ಎಲ್ಲರಿಗು ಸೇರುವುದೂ ಇಲ್ಲವೂ ಅನ್ನೋ ಪ್ರಶ್ನೆ ಕೂಡ ನನ್ನನ್ನು ಕಾಡದೆ ಬಿಡಲಿಲ್ಲ.ಜನರಿಗಾಗಿ ಬರೆದು ಅದನ್ನ ಯಾರೂ ಇಷ್ಟಪಡಲಿಲ್ಲ
ಅಂದ್ರೆ ಬರೆದಿದ್ದೂ ವ್ಯರ್ಥ ಆಲ್ವಾ? ಯಾರೋ ಹೇಳಿದ್ರು ಹಾಸ್ಯಲೇಖನ ಬರೀರಿ ಅದು ಬಹುತೇಕ ಎಲ್ಲರಿಗೂ ಸೇರುತ್ತೆ ಅಂತ. ಮತ್ತೊಬ್ರು ಹೇಳಿದ್ರು
ಪ್ರೇಮದ ಬಗ್ಗೆ ಬರೀರಿ ಈಗಿನ ಹುಡುಗರಿಗೆ ತುಂಬಾ ಸೇರುತ್ತೆ ಅಂತ.ಇನ್ನೊಬ್ರು ಹೇಳಿದ್ರು ದೇವರ ಬಗ್ಗೆ ಬರೀರಿ ಜನರಿಗೆ ಭಕ್ತಿ ಪ್ರಧಾನ ಲೇಖನಗಳು
ತುಂಬಾ ಸೇರುತ್ತೆ ಅಂತ.ಅಬ್ಬ ಏನಪ್ಪಾ ಇದು ವಿಷಯ ಹುಡುಕೊದ್ರೊಳಗೆ 10 ದಿನ ಕಳೆದರೆ ಲೇಖನ ಬರೆಯೋದು ಯಾವಾಗ?
ಅದನ್ನ ಜನರಿಗೆ ಕೊಡೋದು ಯಾವಾಗ?ಎಸ್ಟೆಲ್ಲಾ ಜನ ಲೇಖನ ಬರಿತಾರೆ ಅವರಿಗೂ ಕೂಡ ಈ ವಿಚಾರ ಬಂದಿತ್ತಾ?
ಏನೋಪ್ಪ ನನ್ನ ಲೇಖನ ಬರೆಯೋಕೆ ಯಾವಾಗ ಮುಹೂರ್ತ ಯಾವಾಗ ಬರುತ್ತೋ ಅಂತ ಗೊತ್ತಾಗದೆ ಸುಮ್ನಾದೆ.

2.
ಒಂದು ದಿನ ಇದ್ದಕ್ಕಿದ್ದಂತೆ ಪೆನ್ನು ಹಳೆ ತೆಗೆದು ಇವತ್ತು ಏನೇ ಆಗಲಿ ಏನಾದ್ರು ಗೀಚೋದೆ ಅಂತ ಕುಳಿತೆ.ನಂಗೆ ಮೊದಲಿಗೆ ವಿಚಾರ ಬಂದಿದ್ದು
ಹಾಸ್ಯ ಲೇಖನದ ಬಗ್ಗೆ, ಹಾಗಾಗಿ ಏನಾದ್ರು ಬರೆಯೋಣ ಅಂತ ನಿರ್ಧಾರ ಮಾಡಿದೆ.
ಮತ್ತೆ ಮನದಲ್ಲಿ ಪ್ರಶ್ನೆ ಹಾಸ್ಯದ ಬಗ್ಗೆ ಏನು ಬರೆಯೋದು? ಜನ ದಿನಾ ದೂರದರ್ಶನದಲ್ಲಿ ತುಂಬಾ ಹಾಸ್ಯಗಳನ್ನ ನೋಡ್ತಾ ಇರ್ತಾರೆ,
ದಿನ ಬೆಳಗಾದರೆ ಅದೇ,ಈಗೀಗ ಹಾಸ್ಯ ದಾರಾವಾಹಿಗಳಲ್ಲಿ ನಗುವ ಶಬ್ದವನ್ನು ಕೂಡ ರೆಡಿಮೇಡ್ ಮಾಡಿ ಹಾಸ್ಯ ಮುಗಿದ ಕೂಡಲೇ
ಅದನ್ನ ಬಿತ್ತರಿಸುತ್ತಾರೆ. ಹಾ.ಹಾ.ಹಾ. ಅಂತ. ಅಂದ್ರೆ ಅವರಿಗೇ ನಂಬಿಕೆ ಇಲ್ಲ ಜನ ಇದನ್ನ ನೋಡಿ ನಗ್ತಾರೆ ಅಂತ,ಅದಕ್ಕೆ ಜನ ನಗದೆ ಇದ್ದರೂ
ಅಸ್ಟೇ ಹೋಯ್ತು ನಂದು ಅಂತ ಜೊತೆಗಿರಲಿ ಎಂದು.ಇರ್ಲಿ ಬಿಡಿ. ನಮ್ಮ ಜೀವನದಲ್ಲಿ ಎಸ್ಟೋ ಹಾಸ್ಯ ಪ್ರಸಂಗಗಳು ನಡೆದಿರುತ್ತೆ,
ಅದನ್ನ ಯಾವಾಗಾದ್ರೂ ನಾವು ಮೆಲುಕು ಹಾಕಿ ನಗ್ತಾ ಇರ್ತಿವಿ ಅಲ್ವ?? ಅದು ನಮ್ಮ ಮನಸ್ಸಿಗೆ ಮುದವನ್ನ ನೀಡುತ್ತೆ.
ಕನ್ನಡ ಸಾಹಿತ್ಯದಲ್ಲಿ ಎಸ್ಟೋ ಹಾಸ್ಯ ಕವಿಗಳು ಲೇಖಕರು ಇದಾರೆ, ಅಂಥವರ ಲೇಖನಗಳನ್ನೇ ಯಾರೂ ಓದೋದಿಲ್ಲ ಹಾಗಾದ್ರೆ ನಾನು
ಬರೆದಿದ್ದನ್ನ ಜನ ಓದ್ತಾರಾ?ಮತ್ತೆ ಪ್ರಶ್ನೆ? ಏನೇ ಆಗಲಿ ಏನಾದ್ರು ಬರೆಯೋಣ ಅಂತ.

ಜಾರಿ ಹೋದ ಕಣ್ಣೀರು ಮತ್ತೆ ಕಣ್ಣ ಸೇರೋಲ್ಲ.
ಪ್ರೀತಿ ಹೊರಟು ಹೋದ ಮೇಲೆ ಮತ್ತೆ ಹೃದಯ ಸೇರೋಲ್ಲ.

ಅದೇ ರೀತಿ,
ಎಲಾಸ್ಟಿಕ್ ಹೋದ ನಿಮ್ಮ ಚಡ್ಡಿ, ಎಷ್ಟೆ ಮೇಲೆ ಮಾಡಿದ್ರು ನಿಲ್ಲೋಲ್ಲ. !!!

ಚೆನ್ನಾಗಿದೆ ಆಲ್ವಾ ಕದ್ದಿದ್ದು. ಏನು ಮಾಡೋದು ನಮಗೆ ಬರೆಯೋಕೆ ಬರೋಲ್ಲ ಅಂದಮೇಲೆ ಕದ್ದು  ಅದರ ಮೇಲೆ ಏನಾದ್ರು ಬರೆಯೋದು.
ನಮ್ಮ ಜೀವನದಲ್ಲಿ ದಿನವೂ ಕೂಡ ಏನಾದ್ರೂ ಹಾಸ್ಯ ಸಂಗತಿಗಳು ನಡೀತಾ ಇರ್ತವೆ. ಒಮ್ಮೆ ಏನಾಯ್ತು ಗೊತ್ತ, ನಮ್ಮ ನಾಯಿಮರಿ ಕಳೆದೋಯ್ತು,
ನಾನು ಅಕ್ಕ ಪಕ್ಕದ ಮನೆಗೆ ಹೋಗಿ ನಮ್ಮ ನಾಯಿಮರಿ ಏನಾದ್ರೂ ಬಂದಿದ್ಯ ಅಂತ ವಿಚಾರಿಸೋಕೆ ಹೋದೆ.ಆಗ ನಮ್ಮ ಪಕ್ಕದ ಮನೆ ಹೆಂಗಸು ಏನಂದಳು ಗೊತ್ತ
"ಅದೇನೋ ಗೂಗಲ್ ಅಂತ ಇದೆಯಂತಲ್ಲ ಅಲ್ಲಿ ಏನ್ ಹುಡುಕಿದರೂ ಸಿಗುತ್ತೆ ಅಂತಾರೆ ಅಲ್ಲಿ ಹುಡುಕಿ ಸಿಕ್ಕಿದ್ರೆ ಡೌನ್ಲೋಡ್ ಮಾಡ್ಕೊಳ್ಳಿ"
ಅಬ್ಬಾ ಅವರ ಮಾತಿಗೆ ಏನು ಹೇಳ್ಬೇಕು ಅಂತ ತೋಚದೆ ನಕ್ಕು ನಮ್ಮ ನಾಯಿ ಮರಿ ಹುಡ್ಕೋಕೆ ಹೊರಟೆ.ಆಮೇಲೆ ನಾಯಿಮರಿ ಸಿಕ್ಕಿದ್ದು ಬೇರೆ ವಿಷ್ಯ.
ನಂಗೆ ಯಾವಾಗಲೂ ಗೂಗಲ್ ಓಪನ್ ಮಾಡಿದಾಗ ಈ ವಿಷ್ಯ ನೆನಪಿಸಿಕೊಂಡು ನಗ್ತಾ ಇರ್ತೀನಿ.ಹೋಗ್ಲಿ ಬಿಡಿ.
ಮತ್ತೆ ಹಾಸ್ಯದ ಬಗ್ಗೆ ಏನ್ ಬರೆಯೋದು ಅಂತ ತೋಚದೆ ತಲೆ ಕೆರ್ಕೊಂಡು ಒಂದು ಸಿಂಗಲ್ ಚಹಾ ಇಳಿಸಿ,ಏನಾದ್ರೂ ಒಂದು ಹಾಸ್ಯ ಕವನ ಬರೆಯೋಣ ಅಂತ ಗೀಚತೊಡಗಿದೆ.

ನೀ ಸನಿಹಕೆ ಬಂದರೆ ಏನೋ ಒಂಥರಾ
ನೀ ಸನಿಹಕೆ ಬಂದರೆ ಏನೋ ಒಂಥರಾ
.
ಎರಡು ದಿನ ಸ್ನಾನ ಮಾಡದ ಹಾಗೆ ಕಾಣ್ತಿರ.
ಯಾಕೋ ನನಗೂ ಈ ಹಾಸ್ಯಕ್ಕೂ ಆಗಿಬರೋಲ್ಲ ಅಂತ ಅನಿಸಿ ಪೆನ್ನು ಹಳೆ ಬದಿಗಿಟ್ಟು ಮತ್ತೆ ವಿಚಾರ ಮಾಡೋಕೆ ಶುರುಮಾಡಿದೆ.
ಮತ್ತದೇ ಪ್ರಶ್ನೆ ಏನು ಬರೆಯೋದು??

3.
ಇವತ್ತು ನಂಗೆ ತುಂಬಾ ಬೇಜಾರಾಗಿದೆ.. ಅದು ಪ್ರೀತಿ ವಿಷಯದಲ್ಲಿ.ಹಾಗಾಗಿ ಮತ್ತೆ ಕೈಯ್ಯಲ್ಲಿ ಪೆನ್ನು ಹಾಳೆ. ಇವತ್ತು ಪ್ರೀತಿ ವಿಷಯ.
ಪ್ರೀತಿ ಅಂದರೆ ಈಗಿನ ಕಾಲದ ಅಚ್ಹ ಕನ್ನಡದ ಪದ ಅಂದ್ರೆ "ಲವ್". ಪ್ರೀತಿಯ ಬಗ್ಗೆ ಮಾತಾಡೋಕೆ ತುಂಬಾ ವಿಷಯವಿದೆ ಅಂತ ಅನಿಸ್ತಾ ಇದೆ.
ಆದರೆ ಎಲ್ಲಿಂದ ಶುರು ಮಾಡಬೇಕು ಅನ್ನೋದೇ ಗೊತ್ತಾಗ್ತಾ ಇಲ್ಲ.ಮತ್ತದೇ ಪ್ರಶ್ನೆ.
ಇರಲಿ ನಮ್ಮ ಮುಂಗಾರು ಮಳೆ ಇದೆಯಲ್ಲ ... ಕನ್ನಡದ ನಂಗೆ ತುಂಬಾ ಇಷ್ಟವಾದ ಚಲನಚಿತ್ರ.ಪಾಪ ಅದರಲ್ಲಿ ನಮ್ಮ ಗಣೇಶ್ಗೆ
ಸಿಕ್ಕಿದ್ದೇನು? ದೇವದಾಸ್ ಅಲ್ಲಿ ಆದದ್ದೇನು?ಪ್ರೀತಿ ಮಾಡಿ ಹಾಳಾಗಿ ಹೋಗಿದ್ದು.ಅಂದ್ರೆ ನಾನು ಹೇಳೋಕೆ ಹೊರಟಿದ್ದು ಪ್ರೀತಿ ಮಾಡಿದ್ರೆ
ಹಾಳಾಗಿ ಹೋಗ್ತಾರೆ ಅನ್ನೋ ಥರ ಇದೆ ಅನ್ಕೊಂಡ್ರ..?ಇಲ್ಲ ಹಾಗೇನಿಲ್ಲ. ನಂಗೆ ಈ ಪ್ರೀತಿ ಬಗ್ಗೆ ಒಂದು ವಿಷಯ ಗೊತ್ತಗ್ಬೇಕಾಗಿದೆ,ಏನಂದ್ರೆ
ಈಗಿನ ಕಾಲದ ಪ್ರೀತಿ ಮಾಡೋರ ಬಗ್ಗೆ ಅದರಲ್ಲೂ ಹೆಚ್ಚಾಗಿ ಹುಡುಗಿಯರ ಬಗ್ಗೆ.ತಪ್ಪು ತಿಳ್ಕೊಬೇಡಿ. ಅವರ ಆಸೆ ಏನಂದ್ರೆ ನಾನು ಪ್ರೀತಿಸೋ ಹುಡುಗ ತುಂಬಾ
ದುಡ್ಡು ಇರೋನು ಆಗಿರಬೇಕು,ಬೈಕ್ ಕಾರ್ ಇರಬೇಕು,ನನ್ನ ಆಸೆ ಎಲ್ಲ ಪೂರೈಸಬೇಕು ಇನ್ನೂ ಏನೇನೋ. ಇರಲಿ ಬಿಡಿ .ಆಸೆ ಎಲ್ಲರಿಗೂ ಇರುತ್ತೆ.
ಆದ್ರೆ ಅದು ತುಂಬಾ ಜಾಸ್ತಿ ಅಂತ ನಂಗೆ ಅನ್ಸುತ್ತೆ. ಅವರ ಪ್ರಕಾರ ನೋಡೋಕೆ ಹೋದ್ರೆ ಬಡವರು ಯಾರು ಪ್ರೀತಿ ಮಾಡೋ ಹಾಗಿಲ್ಲ.
ಬೈಕ್ ಅಲ್ಲಿ ಸುತ್ತಿಸಿ,ಸಿನಿಮಾ ತೋರಿಸಿ,ಡ್ರೆಸ್ ಕೊಡಿಸಿ,ಸಂಜೆ ಪಾಣಿ ಪುರಿ ತಿಂದು ಬಂದ್ರೆ ಮುಗಿತು ಪ್ರೀತಿ. ಇದಕ್ಕೆ ಪ್ರೀತಿ ಅನ್ನಬೇಕೋ ಅಥವಾ
ಏನು ಅನ್ನಬೇಕು ಅನ್ನೋದೇ ತಿಳಿಯೋಲ್ಲ.ಶ್ರೀಮಂತರು ಮಾತ್ರ ಪ್ರೀತಿ ಮಾಡೋಕೆ ಯೋಗ್ಯರು,ಬಡವರು ಬರೀ ಕನಸು ಕನೋಕೆ ಮಾತ್ರ ಯೋಗ್ಯರಾ?
ಎಲ್ಲ ಶ್ರೀಮಂತರು ಒಂದೇ ರೀತಿ ಅಂತ ನಾನು ಹೇಳೋಲ್ಲ,ಕೆಲವರು ಪ್ರಿತಿಗಾಗಿ ಎಲ್ಲವನ್ನೂ ತ್ಯಾಗ ಮಾಡೋಕೆ ತಯಾರಿರ್ತಾರೆ,ಆದರೆ ಅದು ಹುಡುಗಿಯರಿಗೆ ಬೇಡ.
ಒಂದು ಹುಡುಗ ಹುಡುಗಿಗೆ "ನಿನ್ನ ಸಲುವಾಗಿ ನಾನು ನನ್ನ ಆಸ್ತಿನೆಲ್ಲ ಬಿಟ್ಟು ಬರೋಕೆ ತಯಾರಿದಿನಿ " ಅಂತ ಹೇಳಿದ್ರೆ ಹುಡುಗಿ ಆಸ್ತಿ ಬಿಟ್ಟು ಬಂದ್ರೆ ಏನು ಮಾಡೋದು?
ಭಿಕ್ಷೆ ಬೇಡೋದ ಅಂತಾಳೆ. ಅಂದ್ರೆ ಅವರಿಬ್ಬರ ನಡುವೆ ಇರೋದು ನಿಜವಾದ ಪ್ರೀತಿನಾ?ಈಗ ನಿಮಗೆ ಗೊತ್ತಾಗಿರಬೇಕಲ್ಲ ನಾನು ಏನು ಹೇಳೋಕೆ ಹೊರಟಿದೀನಿ ಅಂತ.ನಿಜವಾದ ಪ್ರೀತಿ ಅಂದ್ರೆ ಏನು?ಒಂದು ವಿಷಯ ಮಧ್ಯಕ್ಕೆ ನಿಂತು ಹೋಯ್ತು.ಬಡವರ ಪ್ರೀತಿ, ಒಬ್ಬನ ಕೈಲಿ ಗಾಡಿ ಇಲ್ಲದಿರಬಹುದು,ದುಡ್ಡು ಇಲ್ಲದಿರಬಹುದು ಹಾಗಿದ್ರೆ ಅವನಿಗೆ ಪ್ರೀತಿ ಮಾಡೋ ಅಧಿಕಾರನೇ ಇಲ್ವಾ?ಅಂಥವನನ್ನ ಯಾವ ಹುಡುಗಿ ಕೂಡ ಪ್ರಿತಿಸೋದಿಲ್ಲ.ಅವನ ಕಣ್ಣಲಿ ಇರೋ ಪ್ರೀತಿ ಯಾರಿಗೂ ಕಾಣಿಸೋಲ್ವ?ಹುಡುಗಿಯರು ಕೇಳೋದು ನಿಜ,ಬಡವನಾದರೆ ನನ್ನ
ಹೇಗೆ ನೋಡ್ಕೋತಾನೆ? ಅಂತ.ಆದರೆ ಹುಡುಗಿಯರು ನಿಜವಾಗಲೂ ಹುಡುಗರನ್ನ ಪ್ರೀತಿ ಮಾಡ್ತಾರೋ ಅಥವಾ ಅವನ ಹಣವನ್ನೋ ಅನ್ನೋದೇ ತಿಳಿಯೋಲ್ಲ.
ಇದು ಹುಡುಗಿಯರ ವಿಷಯವಾದರೆ ಹುಡುಗರದು ಬೇರೇನೆ. ಅವರು ಕೆವಲ್ಲ ಮೋಜಿಗಾಗಿ ಹುಡುಗಿನ ಪ್ರೀತಿ ಮಾಡ್ತಾರೆ.
ಪ್ರೀತಿಗೆ ಇರೋ ಶಕ್ತಿನೇ ಬೇರೆ ಅಂತಾರೆ.ಪ್ರೀತಿ ಅನ್ನೋದು ಒಬ್ಬ ಮನುಶ್ಯನನ್ನ ಶೂನ್ಯದಿಂದ ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತೆ ಅನ್ನೋದನ್ನ ಕೇಳಿದೀನಿ.
ಈಗಿನ ಕಾಲದಲ್ಲಿ ಪ್ರೀತಿ ಅನ್ನೋದು ಪ್ರೀತಿ ಅಲ್ಲದೆ ಬರೀ ಆಕರ್ಷಣೆ ಆಗಿದೆ ಅನ್ಸಲ್ವಾ? ಒಂದು ಹುಡುಗ ಒಂದು ಹುಡುಗಿ ಒಂದು ವಾರ ಬೈಕ್ ಅಲ್ಲಿ ತಿರುಗಾಡಿ ಮಜಾ ಮಾಡಿದ್ರೆ
ಮುಗಿತು ಪ್ರೀತಿ.ಮುಂದಿನ ವಾರ ನೀನ್ಯಾರೋ ನಾನ್ಯಾರೂ?ಪ್ರೀತಿ ಅನ್ನೋ ಶಬ್ದದ ಅರ್ಥ ಗೊತ್ತಿಲ್ಲದೇ ಪ್ರೀತಿ ಮಾಡೋರಿಗೆ ಹೇಳೋರು ಯಾರು.
ಪ್ರೀತಿ ಬಗ್ಗೆ ಬರೆಯೋಕೆ ಹೋದ್ರೆ ಶಬ್ದಗಳು ಸಾಲೊಲ್ಲ ಬಿಡಿ. ಹೀಗೆ ಬರ್ದ್ರೆ ಎಲ್ಲ ಪ್ರೇಮಿಗಳು ನಂಗೆ ಹಿಡ್ಕೊಂಡು ಹೊಡೆಯೋದಂತೂ ನಿಜ. ಮತ್ತೆ ಅದೇ ಪ್ರಶ್ನೆ?
ಏನು ಬರೆಯೋದು...? ಹೋಗುವ ಮುನ್ನ ಎಲ್ಲ ನಿಜವಾದ ಪ್ರೇಮಿಗಳಿಗಾಗಿ,

ಮುಂಗಾರಿನ ಮಳೆ ಹನಿ ಹನಿಯಾಗಿ ಸುರಿದಿದೆ
ಮತ್ತೆ ನನ್ನವಳ ನೆನಪ ತಂದಿದೆ.
ಮರೆಯಲಾಗದೆ ಕಳೆದ ದಿನ ಅವಳ ಜೊತೆ
ಮತ್ತೆ ಸೇರು ಬಾ ನನ್ನ ಜೊತೆ ಎಂದಿದೆ.

ಮತ್ತೆ ಹೊಸ ವಿಷಯದೊಂದಿಗೆ ಸಿಗುವೆನು.


No comments:

Post a Comment