ವಿಜಯ್ ನದು ಒಂದು ಚಿಕ್ಕ ಕುಟುಂಬ.ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡಿದ್ದ, ಆ
ನಂತರ ಅಮ್ಮನೇ ಎಲ್ಲ ವಿಜಿಗೆ.ಮನೆಯಲ್ಲಿ ಇದ್ದದ್ದು ವಿಜಿ ಅವನ ತಾಯಿ ಮತ್ತು ತಂಗಿ
ಮಾತ್ರ.ತಾಯಿ ಕಷ್ಟಪಟ್ಟು ದುಡಿದು ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ
ನೋಡಿಕೊಳ್ಳುತ್ತಿದ್ದರು.ಡಿಗ್ರಿಯ ಕೊನೆಯ ವರ್ಷ ವಿಜಿಯದು.ತಂಗಿ ಚರಿತಳದು ಪಿ ಯು ಸಿ
ಮೊದಲನೆಯ ವರ್ಷ.ತುಂಬಾ ಚುರುಕು ಮತ್ತು ಚೂಟೀಯಾಗಿದ್ದ ವಿಜಿ ಕಾಲೇಜ್ ಸೆರಿದ ಮೆಲೆ ಸಹವಾಸ
ದೋಷದಿಂದ ಕೆಟ್ಟ ಚಟಗಳಿಗೆ ಬಲಿಯಾಗಿದ್ದ.ಸಾಕಷ್ಟು ಬುದ್ದಿ ಹೇಳಿ ಅಮ್ಮ ಕೋನೆಗೆ ಸೋತು
ಸುಮ್ಮನಾಗಿದ್ದರು.ನೀ ಹೀಗೆ ನಡೆದುಕೋಳ್ಳುತ್ತಿದ್ದರೆ ಮುಂದೆ ನಿನ್ನ ತಂಗಿಯ ಗತಿಯೇನು
ಎಂದೆಲ್ಲ ಸಮಝಾಯಿಸಿ ಹೆಳಿದರೂ ಎನೂ ಉಪಯೋಗವಾಗಲಿಲ್ಲ.ಹಾಗಾಗಿ ಅಮ್ಮ ಅಣ್ಣ ತಂಗಿಯ ನಡುವಿನ
ಒಡನಾಟವನ್ನೇ ಕಡಿಮೆ ಮಾಡಿಬಿಟ್ಟಿದ್ದರು.ಇತ್ತೀಚೆಗೆಗಂತೂ ದಿನವಿಡೀ ಪೊಲಿ ಹುಡುಗರ ಜೊತೆ
ಸೆರಿ ಹರಟುತ್ತ ಉರೂರು ಅಲೆಯುತ್ತ ದಿನ ಕಳೆಯುತ್ತಿದ್ದ. ಅದೊಂದು ದಿನ ವಿಜಿ ಎಂದಿನಂತೆ
ಕಾಲೇಜಿನಲ್ಲಿ ಹುಡುಗರ ಜೋತೆ ಹರಟುತ್ತಿದ್ದ.ತುಂಬಾ ಬಿಸಿ ಬಿಸಿ ಸುದ್ದಿ
ಚರ್ಚೆಯಗುತ್ತಿತ್ತು.ವಿಜಿಯ ಪೋಲಿ ಗೆಳೆಯರಲ್ಲಿ ಒಬ್ಬನಾದ ಸಿದ್ದು ಒಂದು ಹುಡುಗಿ ಹಿಂದೆ
ಬಿದ್ದಿದ್ದ,ಹಿಂದಿನ ದಿನ ಪ್ರಪೋಸ್ ಮಾಡುವುದಾಗಿ ಹೇಳಿ ಹೊಗಿದ್ದ.ಇಂದು ಸಿದ್ದು
ಕಾಲೇಜಿಗೆ ಬರುವುದೇ ತಡ ಎಲ್ಲರೂ ಸುತ್ತರಿದು ಎನಾಯ್ತೊ ಮಗ ನಿನ್ ಲವ್ ಸ್ಟೊರಿ ಅಂತ
ಕಾಡತೋಡಗಿದರು.ಅವಳು ಖಡಾಖಂಡಿತವಾಗಿ ನಿರಾಕರಿಸಿದ್ದನ್ನ ತಲೆ ಕೆಳ ಹಾಕಿಕೊಂಡೇ ಹೇಳಿದ
ಸಿದ್ದು.ಬಿಟ್ಟಾಕು ಮಗಾ ಅವಳಲ್ಲದಿದ್ದರೆ ಮತ್ತೋಬ್ಬಳು ಸಿಗ್ತಾಳೆ ಅಂದರೂ ಕೇಳದ ಸಿದ್ದು
ಅವಳಿಗೆ ಒಂದು ಗತಿ ಕಾಣಿಸುವ ನಿರ್ಧಾರಕ್ಕೆ ಬಂದ. ಅವನ ಸಹಾಯಕ್ಕೆ ವಿಜಿಯ ಜೊತೆಗೆ ಕೆಲ
ಸ್ನೇಹಿತರೆಲ್ಲ ತಯಾರಾದರು.ಎಲ್ಲರೂ ಸೇರಿ ಅವಳ ಮುಖಕ್ಕೆ ಆಸಿಡ್ ಎರಚುವ ನಿರ್ಧಾರಕ್ಕೆ
ಬಂದರಲ್ಲದೆ ಎಲ್ಲವನ್ನೂ ಸರಿಯಾಗಿ ಪ್ಲಾನ್ ಮಾಡಿ ಸಂಜೆಯ ಹೊತ್ತಿಗೆ ಅವಳು ಕಾಲೇಜಿನಿಂದ
ಮನೆಗೆ ಹೋಗುವ ದಾರಿಯಲ್ಲಿ ಸ್ವಲ್ಪ ನಿರ್ಜನ ಪ್ರದೇಶದಲ್ಲಿ ಈ ಕೆಲಸವನ್ನ ಮಾಡುವುದಾಗಿ
ತೀರ್ಮಾನಿಸಿದರು.
ಅಂದು ಅವಳು ಸಂಜೆಯ ಹೊತ್ತಿಗೆ ಗೆಳೆತಿಯರ ಜೊತೆಗೂಡಿ ಮನೆಯ ಕಡೆ ಹೊರಟಿದ್ದಳು,ತುಸು ಕತ್ತಲಾದ್ದರಿಂದ ಮುಖಗಳೆಲ್ಲ ಅಸ್ಪಷ್ಟವಾಗಿದ್ದವು. ಸರಿಯಾಗಿ ಗುರುತಿಸಿ ಅವಳ ಕಡೆ ಬೊಟ್ಟು ಮಾಡಿದ್ದ ಸಿದ್ದು. ತಾನೇ ಖುದಾಗಿ ತಂದಿದ್ದ ಆಸಿಡ್ ಬಾಟಲ್ ನ್ನ ಸಿದ್ದುವಿನ ಕೈಗಿಡುತ್ತ ವಿಜಿ ಬೇಗ ಹೋಗಿ ಕೆಲಸ ಮುಗಿಸಿಕೊಂಡು ಬರುವಂತೆ ಸೂಚಿಸಿ ತಾನು ಆಚಿಚೆಗೆ ಗಮನಿಸುವುದಾಗಿ ತಿಳಿಸಿದ.ಕೆಲವೇ ಕ್ಷಣದಲ್ಲಿ ನಿರ್ಜನವಾದ ಆ ಪ್ರದೇಶ ಜನರಿಂದ ತುಂಬಿತ್ತು..ಕ್ಷಣಾರ್ಧದಲ್ಲೇ ಅರಳಿ ಹೂವಾಗಬೇಕಿದ್ದ ಮೊಗ್ಗೊಂದು ಬಾಡಿಹೋಗಿತ್ತು.ಸಾವಿರಾರು ಆಸೆ ತುಂಬಿಕೊಂಡಿದ್ದ ಕಣ್ಣುಗಳಲ್ಲಿ ರಕ್ತ ಸುರಿಯುತ್ತಿತ್ತು.ಸುಂದರ ಕುಸುಮವೊಂದು ಸುಟ್ಟು ಕರಕಲಾಗಿತ್ತು. ಎಲ್ಲರೂ ಗುಂಪುಗೂಡಿ ಮಧ್ಯದಲ್ಲಿ ಮುಖದ ಮೇಲೆ ಕೈ ಇಟ್ಟುಕೊಂಡು ಅಸಹಾಯಕತೆಯಿಂದ ರೋಧಿಸುತ್ತಿದ್ದ ಅವಳನ್ನ ನೋಡಿ ಏನೂ ಸಂಬಂಧವಿಲ್ಲದಂತೆ ಸರಿಯುತ್ತಿದ್ದರು.ಕೊನೆಗೊಬ್ಬ ಪುಣ್ಯಾತ್ಮರಾರೋ ಗೆಳತಿಯ ಸಹಾಯದಿಂದ ಅವಳನ್ನ ಆಸ್ಪತ್ರೆಗೆ ಸೇರಿಸಿ ಮನೆಗೆ ಹೇಳಿಕಳುಹಿಸಿದರು. ಇತ್ತ ದೊಡ್ಡ ಯುದ್ಧದಲ್ಲಿ ಜಯಭೆರಿ ಬಾರಿಸಿದಂತೆ ಕುಣಿದು ಕುಪ್ಪಳಿಸುತ್ತಿತ್ತು ಹುಡುಗರ ದಂಡು.ರಾತ್ರಿಯವರೆಗೆ ಮಜಾಮಾಡಿ ಎಲ್ಲರೂ ಮನೆಯ ದಾರಿ ಹಿಡಿದರು.ವಿಜಿ ಏನೋ ಖುಷಿಯಿಂದ ಮನೆಗೆ ಬಂದಿದ್ದ,ಮನೆಗೆ ಬೀಗ ಇದ್ದದ್ದನ್ನ ನೋಡಿ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಮನೆಗೆ ಬಂಡ ಕೂಡಲೇ ಅಮ್ಮ ಆಸ್ಪತ್ರೆಗೆ ಬರುವುದಾಗಿ ಹೇಳಿದ್ದಾರೆಂದು ತಿಳಿದು ಆಸ್ಪತ್ರೆಯ ಕಡೆಗೆ ಹೆಜ್ಜೆ ಹಾಕಿದ್ದ.ಆಸ್ಪತ್ರೆಯಲ್ಲಿ ಮೂಲೆಯಲ್ಲಿ ಕುಳಿತು ಅಳುತ್ತಿದ್ದ ಅಮ್ಮನನ್ನ ನೋಡಿ ಏನಾಯ್ತಮ್ಮ ಈಗ?ದಿನವೂ ಒಬ್ಬರಿಗಲ್ಲ ಒಬ್ಬರಿಗೆ ಏನಾದರೂ ಆಗುತ್ತಲೇ ಇರುತ್ತೆ, ಹಾಗಂತ ದಿನವೂ ಕಣ್ಣೀರಿಡುತ್ತಾ ಕುಳಿತರೆ ಹೇಗೆ? ಪರೋಪಕಾರ ಮಾಡುವುದನ್ನ ಬಿಟ್ಟು ಮನೆಗೆ ನಡಿ ನನಗೆ ತುಂಬಾ ಹಸಿವಾಗಿದೆ ಅಂತ ತಿರಸ್ಕಾರದಿಂದಲೇ ನುಡಿದಿದ್ದ.ಇದನ್ನೆಲ್ಲಾ ಕೇಳಿ ಅಮ್ಮನ ಆಕ್ರಂದನ ಜೋರಾಗಿತ್ತು.ಏನಾಯಿತೀಗ ಅಂತ ಕೋಪದಿಂದಲೇ ನುಡಿದ ವಿಜಿ. ಯಾರೋ ನಮ್ಮ ಚರಿತಳ ಮೇಲೆ ಆಸಿಡ್ ಹಾಕಿದ್ದಾರೆ ಕಣೋ, ಬದುಕುಳಿಯುವುದು ತುಂಬಾ ಕಷ್ಟ ಅಂತ ಡಾಕ್ಟರ್ ಹೇಳಿದ್ದಾರೆ ಅಂತ ಜೋರಾಗಿ ಕಣ್ಣೀರಿಡಲು ಸಂಜೆ ಗೆಳೆಯರ ಜೊತೆಗೂಡಿ ಆಸಿಡ್ ಹಾಕಿದ್ದು ನನ್ನ ಸ್ವಂತ ತಂಗಿಯ ಮೇಲೆ ಅಂತ ಗೊತ್ತಾಗಿ ನಿಂತಲ್ಲೇ ಕುಸಿದ ವಿಜಿ. ಯಾರೋ ನಮ್ಮ ಚರಿತಳನ್ನ ಚುಡಾಯಿಸುತ್ತಿದ್ದಾರಂತೆ ಕಣೋ ನೀನು ಇಡೀ ದಿನ ಪೋಲಿ ಹುಡುಗರ ಜೊತೆ ಅಲೆಯುವುದನ್ನ ಬಿಟ್ಟು ಸ್ವಲ್ಪ ಅವಳ ಬಗ್ಗೆ ಗಮನ ಕೊಡೊ, ನೀನೆ ಪೋಲಿಯಾದರೆ ಅವಳನ್ನ ನೋಡಿಕೊಳ್ಳೋರು ಯಾರೋ ಅಂತೆಲ್ಲ ಕೆಲ ದಿನದ ಹಿಂದೆಯೇ ಅಮ್ಮ ಹೇಳಿದ್ದ ಮಾತುಗಳೆಲ್ಲ ವಿಜಿಯ ಮನಸ್ಸಿಗೆ ಬಾಣಗಳಂತೆ ಬಂದು ಅಪ್ಪಳಿಸಿದಾಗ ತನಗರಿಯದೇ ವಿಜಿಯ ಕಣ್ಣು ತುಂಬಿ ಬಂದಿತ್ತು.
ಕಾಲ ಮಿಂಚಿತ್ತು ,ಹೂವು ಬಾಡಿತ್ತು
ವಿಧಿಯ ಅಟ್ಟಹಾಸಕೆ,
ಮುಗ್ಧ ಜೀವ ಬಲಿಯಾಗಿತ್ತು.

ಗಣೇಶ್, ಬಹಳ ಹೃದಯಸ್ಪರ್ಶಿ ಕಥೆ. ಚೆನ್ನಾಗಿ ಬರೆದಿದ್ದೀರಿ. ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತು ಅನ್ನಿಸಿತಾದರೂ ನಿಮ್ಮ ಮೊದಲ ಪ್ರಯತ್ನ ಗಮನ ಸೆಳೆಯುತ್ತದೆ. ಮುಂದುವರಿಸಿ .... ಶುಭ ಹಾರೈಕೆಗಳು
ReplyDeleteಧನ್ಯವಾದಗಳು.
Delete